ಸ್ಟಾರ್ ನಿರ್ದೇಶಕ, ಸ್ಟಾರ್ ನಟನ ಜೊತೆಗೆ ರಾಕಿ ಭಾಯ್ ಯಶ್ ಮುಂದಿನ ಸಿನಿಮಾ?!

ಬೆಂಗಳೂರು| Krishnaveni K| Last Modified ಶುಕ್ರವಾರ, 22 ಜನವರಿ 2021 (07:55 IST)
ಬೆಂಗಳೂರು: ಕೆಜಿಎಫ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಸ್ಟಾರ್ ವಾಲ್ಯೂ ಹೆಚ್ಚಾಗಿದೆ. ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಮುಂದಿನ ಸಿನಿಮಾ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

 
ಮೂಲಗಳ ಪ್ರಕಾರ ಯಶ್ ಮುಂದಿನ ಸಿನಿಮಾ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಸೆಟ್ಟೇರಲಿದೆ. ಈ ಸಿನಿಮಾದಲ್ಲಿ ಯಶ್ ಜೊತೆಗೆ ತೆಲುಗು ಸ್ಟಾರ್ ನಟ ರಾಮ್ ಚರಣ್ ತೇಜ್ ಕೂಡಾ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಯಶ್ ಈಗಾಗಲೇ ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :