ಕೇರಳ ಪೊಲೀಸರ ಮಾಸ್ಕ್ ಜಾಗೃತಿಗೆ ರಾಕಿ ಭಾಯ್ ಯಶ್!

ಬೆಂಗಳೂರು| Krishnaveni K| Last Modified ಮಂಗಳವಾರ, 11 ಮೇ 2021 (10:24 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಕೇರಳದಲ್ಲೂ ಅಭಿಮಾನಿ ಬಳಗವಿದೆ. ಇದೀಗ ಕೇರಳ ಪೊಲೀಸರ ಮಾಸ್ಕ್ ಜಾಗೃತಿಗೆ ಯಶ್ ಫೋಟೋ ಬಳಸಲಾಗಿದೆ.

 
ಕೇರಳ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಮಾಸ್ಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ರಾಕಿ ಭಾಯ್ ಯಶ್ ಫೋಟೋ ಬಳಕೆ ಮಾಡಿದ್ದು, ಸುರಕ್ಷತೆ ಮೊದಲು ಎಂದು ಸಂದೇಶ ನೀಡುತ್ತಿದ್ದಾರೆ.
 
ಅಂತೂ ಕನ್ನಡ ಮೂಲದ ಹೀರೋ ಫೋಟೋ ಬಳಸಿ ಕೇರಳದಲ್ಲೂ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ನೋಡಿ ಯಶ್ ಅಭಿಮಾನಿಗಳಿಗೂ ಖುಷಿಯಾಗಿದೆ.
ಇದರಲ್ಲಿ ಇನ್ನಷ್ಟು ಓದಿ :