Widgets Magazine

ಕೆಜಿಎಫ್ 2 ಮನೆಯಲ್ಲಿ ರಾಕಿ ಬಾಯ್-ರವೀನಾ ಟಂಡನ್ ಮಸ್ತ್ ಮಸ್ತ್ ಟಾಕ್!

ಬೆಂಗಳೂರು| Krishnaveni K| Last Modified ಬುಧವಾರ, 12 ಫೆಬ್ರವರಿ 2020 (08:57 IST)
ಬೆಂಗಳೂರು: ಸಿನಿಮಾಗೆ ಬಾಲಿವುಡ್ ನಟಿ ರವೀನಾ ಟಂಡನ್ ಎಂಟ್ರಿ ಕೊಟ್ಟಿರುವ ವಿಚಾರ ಈಗಾಗಲೇ ಗೊತ್ತಾಗಿದೆ. ಇದೀಗ ರಾಕಿಂಗ್ ಸ್ಟಾರ್ ಯಶ್ ತಾವು ರವೀನಾ ಜತೆಗಿರುವ ಫೋಟೋ ಪ್ರಕಟಿಸಿದ್ದಾರೆ.

 
ಕೆಜಿಎಫ್ 2 ನಲ್ಲಿ ರಮಿಕಾ ಸೇನ್ ಎಂಬ ಪ್ರಭಾವಿ ಪಾತ್ರ ಮಾಡುತ್ತಿರುವ ರವೀನಾ ಆ ವಿಚಾರವನ್ನು ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದು, ‘ರಾಕಿ ಬಾಯ್ ಮೇಲೆ ಡೆತ್ ವಾರೆಂಟ್ ಹೊರಡಿಸಲಾಗಿದೆ’ ಎಂದು ಬರೆದುಕೊಂಡಿದ್ದರು. ಇದಕ್ಕೆ ಯಶ್ ಪ್ರತಿಕ್ರಿಯಿಸಿದ್ದು, ‘ವಾರಂಟ್ ಚೀಸ್ ಬಡೀ ಮಸ್ತ್ ಮಸ್ತ್. ಆದರೆ ವಾರಂಟ್ ಗೂ ರಾಕಿ ಬಾಯ್ ಅಪ್ರೂವಲ್ ಬೇಕು’ ಎಂದಿದ್ದಾರೆ.
 
ಅಷ್ಟೇ ಅಲ್ಲ ತಮ್ಮ ಇನ್ ಸ್ಟಾಗ್ರಾಂನಲ್ಲಿ ರವೀನಾ ಜತೆಗಿರುವ ಇನ್ನೊಂದು ಫೋಟೋ ಪ್ರಕಟಿಸಿರುವ ಯಶ್ ‘ರಮೀಕಾ ಸೇನ್ ಗೆ ರಾಕಿ ಬಾಯ್ ಗಡಿಯೊಳಗೆ ಪ್ರವೇಶ ಸಿಗದು. ಆದರೆ ರವೀನಾ ಮೇಡಂಗೆ ಖಂಡಿತಾ ಯಶ್ ತವರೂರಿಗೆ ಸ್ವಾಗತವಿದೆ. ನಿಮ್ಮನ್ನು ನಮ್ಮ ತಂಡಕ್ಕೆ ಸ್ವಾಗತಿಸಲು ಖುಷಿಯಾಗುತ್ತಿದೆ’ ಎಂದು ವೆಲ್ ಕಂ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :