ರೊಮ್ಯಾಂಟಿಕ್ ಥ್ರಿಲ್ಲರ್ ’ವಿಂಡೋಸೀಟ್’ ಬಗ್ಗೆ ರೋಮಾಂಚಕ ಕುತೂಹಲ!

ಶೀತಲ್ ಶೆಟ್ಟಿ ಸಿನಿಮಾಗಾಗಿ ಸಿನಿ ಪ್ರಿಯರ ಕಾತರ!

ಬೆಂಗಳೂರು| Rajesh patil| Last Modified ಭಾನುವಾರ, 21 ಜೂನ್ 2020 (15:29 IST)
ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರವೀಗ ಸಿನಿಮಾ ಪ್ರೇಮಿಗಳ ಚರ್ಚೆಗೆ ಗ್ರಾಸವೊದಗಿಸಿದೆ. ಈಗಾಗಲೇ ಟೈಟಲ್ ಪೋಸ್ಟರ್ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಇದಾಗಿದೆ. ಅದೇ ಸಿನಿಮಾದ ಮುಂದಿನ ಅಪ್ ಡೇಟ್ ಯಾವಾಗ ಸಿಗುತ್ತೆ ಎಂಬ ಕುತೂಹಲ ಹಟ್ಟಿಸಿತ್ತು. ಆದ್ರೆ ಅದಕ್ಕೆ ಈ ಕೊರೋನಾ ಎಂಬ ಮಹಾಮಾರಿ ಅಡ್ಡಿಯಾಗಿತ್ತು. ಇದೀಗ ಎಲ್ಲ ಪ್ರಾಬ್ಲಮ್ಸ್ ಕಳೆದಿದ್ದು, ಅಭಿಮಾನಿಗಳಿಗೆ ಖುಷಿ ನೀಡಲು ಬರ್ತಿದ್ದಾರೆ ಶೀತಲ್ ಶೆಟ್ಟಿ ಆಂಡ್ ಟೀಂ.
window seat
ಹೌದು, ಭಾರೀ ಕುತೂಹಲ ಹುಟ್ಟಿಸಿದ್ದ ’ವಿಂಡೋಸೀಟ್’ ಇದೀಗ ಒಂದೊಂದೆ ಅಪ್ ಡೇಟ್ ನೀಡಲು ರೆಡಿಯಾಗಿದೆ. ಮುಂದಿನ ವಿವರಗಳಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಫಸ್ಟ್ ಲುಕ್ ರಿಲೀಸ್ ಮಾಡಿ ಖುಷಿಕೊಡಲಿದೆ ತಂಡ. ಸಿನಿಮಾಗೆ  ‘ರಂಗಿತರಂಗ’ ನಿರೂಪ್ ಭಂಡಾರಿ ನಾಯಕನಟರಾಗಿದ್ದು, ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿದ್ದಾರೆ. ಇದೊಂದು ಮರ್ಡರ್ ಮಿಸ್ಟ್ರಿ ಸಿನಿಮಾವಾಗಿದೆ.
 
ಈಗಾಗಲೇ ಅದರ ಒಂದು ಪೋಸ್ಟರ್ ಓಡಾಡುತ್ತಿದ್ದು, ರೊಮ್ಯಾಂಟಿಕ್ ಥ್ರಿಲ್ಲರ್ ಎಂಬುದು ಎದ್ದು ಕಾಣುತ್ತಿದೆ. ಟ್ರೈನ್ ನ ವಿಂಡೋ ಒಂದು ಆ ಚಿತ್ರದಲ್ಲಿದ್ದು, ರಕ್ತದ ಹನಿಯೂ ಎಲ್ಲರಲ್ಲಿ ಕಥೆಯ ಬಗ್ಗೆ ಕುತೂಹಲ ಹುಟ್ಟಿಸುವಂತೆ ಮಾಡಿದೆ. ಜೊತೆಗೆ ಇನ್ವೆಸ್ಟಿಗೇಷನ್ ಚಿತ್ರಣಗಳು ಪೋಸ್ಟರ್ ನಲ್ಲಿ ಕಾಣುತ್ತಿರೋದರಿಂದ ಸಿನಿಮಾದ ಮೇಲೆ ನಿರೀಕ್ಷೆ ಮೂಡಿಕೊಂಡಿದೆ.
ಸಿನಿಮಾಗೆ ಮಂಜುನಾಥ್ ಗೌಡ ಅಲಿಯಾಸ್ ಜಾಕ್ ಮಂಜು ಹಣ ಹೂಡಿಕೆ ಮಾಡುತ್ತಿದ್ದು, ಶೀತಲ್ ಶೆಟ್ಟಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ವಿಘ್ನೇಶ್ ರಾಜ್ ಛಾಯಾಗ್ರಹಣ, ರಿತ್ವಿಕ್ ಸಂಕಲನ ಮಾಡುತ್ತಿದ್ದಾರೆ. ಯೋಗರಾಜ್ ಭಟ್, ಕವಿ ರಾಜ್ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :