ಬಾಲಿವುಡ್ ಹಿರಿಯ ನಟಿ ಸಾಯಿರಾ ಭಾನು: ಐಸಿಯುಗೆ ದಾಖಲು

bengaluru| Geetha| Last Modified ಬುಧವಾರ, 1 ಸೆಪ್ಟಂಬರ್ 2021 (16:04 IST)
ಬಾಲಿವುಡ್ ಹಿರಿಯ ನಟಿ ಹಾಗೂ ಇತ್ತೀಚೆಗೆ ನಿಧನರಾದ ದಿಲಿಪ್ ಕುಮಾರ್ ಪತ್ನಿ ಸಾಯಿರಾ ಭಾನು ಅಸ್ವಸ್ಥಗೊಂಡಿದ್ದು, ಮುಂಬೈ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ
ದಲ್ಲಿ ದಾಖಲಿಸಲಾಗಿದೆ. ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಸಾಯಿರಾ ಭಾನು ಅವರನ್ನು ಮೂರು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಸಾಯಿರಾ ಭಾನು ಅವರ ಪತಿ ಹಾಗೂ ನಟ ದಿಲೀಪ್ ಕುಮಾರ್ ಅನಾರೋಗ್ಯದ ಕಾರಣ ಜುಲೈ 7ರಂದು ನಿಧನರಾಗಿದ್ದರು.> >


ಇದರಲ್ಲಿ ಇನ್ನಷ್ಟು ಓದಿ :