ಕನ್ನಡಕ್ಕೆ ಗೂಗಲ್ ನಲ್ಲಿ ಅವಮಾನ: ಒಗ್ಗಟ್ಟಾದ ಕಲಾವಿದರು

ಬೆಂಗಳೂರು| Krishnaveni K| Last Modified ಶುಕ್ರವಾರ, 4 ಜೂನ್ 2021 (09:20 IST)
ಬೆಂಗಳೂರು: ಭಾಷೆಗೆ ಗೂಗಲ್ ನಲ್ಲಿ ಅವಮಾನವಾಗಿದ್ದನ್ನು ಸ್ಯಾಂಡಲ್ ವುಡ್, ಕಿರುತೆರೆಯ ಕಲಾವಿದರು ಒಗ್ಗಟ್ಟಾಗಿ ಸಾಮಾಜಿಕ ಜಾಲತಾಣದ ಮೂಲಕ ಖಂಡಿಸಿದ್ದಾರೆ.  
> ಗೂಗಲ್ ನಲ್ಲಿ ಅತ್ಯಂತ ಕೆಟ್ಟ ಭಾಷೆ ಯಾವುದು ಎಂಬ ಪ್ರಶ್ನೆಗೆ ಕನ್ನಡ ಎಂದು ಉತ್ತರ ಬರುತ್ತಿತ್ತು. ಇದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲೆಡೆಯಿಂದ ಒಕ್ಕೊರಲಾಗಿ ಗೂಗಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.>   ಇದಕ್ಕೆ ಸ್ಯಾಂಡಲ್ ವುಡ್ ಕಲಾವಿದರು, ಕಿರುತೆರೆ ಕಲಾವಿದರೂ ಕೈ ಜೋಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಗೂಗಲ್ ವಿರುದ್ಧ ರಿಪೋರ್ಟ್ ಮಾಡಿ ಎಂದು ಕಲಾವಿದರು ಸಂದೇಶ ಕೊಟ್ಟಿದ್ದಾರೆ. ಇವರೆಲ್ಲರ ಒಕ್ಕೊರಲಿನ ಕರೆಗೆ ಕೊನೆಗೂ ಮಣಿದ ಗೂಗಲ್ ಕ್ಷಮೆ ಯಾಚಿಸಿತು.ಇದರಲ್ಲಿ ಇನ್ನಷ್ಟು ಓದಿ :