Widgets Magazine

ಯುಗಾದಿ ಹಬ್ಬಕ್ಕೆ ಎಚ್ಚರಿಕೆಯ ಜತೆ ಶುಭ ಕೋರಿದ ತಾರೆಯರು

ಬೆಂಗಳೂರು| Krishnaveni K| Last Modified ಬುಧವಾರ, 25 ಮಾರ್ಚ್ 2020 (09:42 IST)
ಬೆಂಗಳೂರು: ಇಂದು ಯುಗಾದಿ ಹಬ್ಬ. ಆದರೆ ಕೊರೋನಾವೈರಸ್ ನಿಂದಾಗಿ ಹಬ್ಬದ ಕಳೆಯೇ ಮಾಸಿ ಹೋಗಿದೆ. ಜನರು ದಿನ ಕಳೆಯುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ ಸ್ಯಾಂಡಲ್ ವುಡ್ ತಾರೆಯರು ಶುಭಾಷಯದ ಜತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
 

ಯುಗಾದಿ ಹಬ್ಬಕ್ಕೆ ಶುಭ ಕೋರಿರುವ ನಟ ಪುನೀತ್ ರಾಜ್ ಕುಮಾರ್ ಮನೆಯಲ್ಲೇ ಇರಿ, ಸೇಫ್ ಆಗಿರಿ ಎಂದಿದ್ದಾರೆ. ಈ ಬಾರಿ ಹಬ್ಬದೂಟ ಮಾಡುವ ಸ್ಥಿತಿಯಲ್ಲಿ ಅಭಿಮಾನಿಗಳಿಲ್ಲ.
 
ನಟ ರಮೇಶ್ ಅರವಿಂದ್, ಜಗ್ಗೇಶ್, ಅನಿರುದ್ಧ್,  ನಟಿ ತಾರಾ ಸೇರಿದಂತೆ ಅನೇಕರು ಯುಗಾದಿ ಹಬ್ಬಕ್ಕೆ ಶುಭಾಷಯ ಕೋರಿದ್ದಾರೆ. ಮನೆಯಲ್ಲೇ ಇದ್ದು ಹಬ್ಬ ಸರಳವಾಗಿ ಆಚರಿಸಿ ಎಂದೂ ಕರೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :