ಕಮ್ ಬ್ಯಾಕ್ ಮಾಡಲು ಹೊರಟ ಕಿಚ್ಚ ಸುದೀಪ್ ಗೆ ಬುದ್ಧಿಮಾತು ಹೇಳಿದ ಸಹ ಕಲಾವಿದರು

ಬೆಂಗಳೂರು| Krishnaveni K| Last Modified ಶುಕ್ರವಾರ, 30 ಏಪ್ರಿಲ್ 2021 (09:52 IST)
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ ಇದೀಗ ಸುಧಾರಿಸಿಕೊಂಡಿದ್ದು, ಕಮ್ ಬ್ಯಾಕ್ ಮಾಡಲಿದ್ದಾರೆ.
 > ಈ ವಾರ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುತ್ತಿರುವುದಾಗಿ ಕಿಚ್ಚ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಚಿತ್ರರಂಗದ ಗೆಳೆಯರು ಅವರಿಗೆ ಸಲಹೆ ನೀಡಿದ್ದಾರೆ.>   ನಿರ್ದೇಶಕ ರವಿ ಶ್ರೀವತ್ಸ ಕಿಚ್ಚ ಗುಣಮುಖರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಪರಿಸ್ಥಿತಿ ಈಗ ಸರಿಯಿಲ್ಲ ಗೆಳೆಯಾ. ಮತ್ತೆ ಶೂಟಿಂಗ್ ಗೆ ಹಾಜರಾಗುವ ಮೊದಲು ಯೋಚನೆ ಮಾಡಿ. ದಯವಿಟ್ಟು ಇನ್ನೂ ಒಂದು ವಾರ ರೆಸ್ಟ್ ಮಾಡಿ. ನಮಗೆ ನೀವಂದರೆ ಇಷ್ಟ, ಅದಕ್ಕೇ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
 
ಇನ್ನು, ನಟಿ ಮಾಳವಿಕಾ ಅವಿನಾಶ್ ಕೂಡಾ ಇದೇ ರೀತಿ ಸಲಹೆ ನೀಡಿದ್ದಾರೆ. ನೀವು ಆರೋಗ್ಯವಾಗಿರುವುದಕ್ಕೆ ದೇವರಿಗೆ, ವೈದ್ಯರಿಗೆ ಧನ್ಯವಾದ ಹೇಳಬೇಕು. ನಿಮ್ಮ ಅನಾರೋಗ್ಯ ನಮಗೆ ಚಿಂತೆಯಾಗಿತ್ತು. ಇಷ್ಟು ಬೇಗ ಚೇತರಿಸಿಕೊಂಡಿದ್ದೇ ನಮಗೆಲ್ಲಾ ಸಮಾಧಾನ. ಆರೋಗ್ಯ ಕಾಪಾಡಿಕೊಳ್ಳಿ ಎಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :