ಬಾಲಿವುಡ್ ಬಳಿಕ ಸ್ಯಾಂಡಲ್ ವುಡ್ ನಲ್ಲೂ ಆವರಿಸಿದ ಕೊರೋನಾ ಭೀತಿ

ಬೆಂಗಳೂರು| Krishnaveni K| Last Modified ಗುರುವಾರ, 16 ಜುಲೈ 2020 (09:07 IST)
ಬೆಂಗಳೂರು: ನಟ ಧ್ರುವ ಸರ್ಜಾ ದಂಪತಿಗೆ ಕೊರೋನಾ ತಗುಲಿರುವ ಸುದ್ದಿ ಹಬ್ಬುತ್ತಿದ್ದಂತೇ ಈಗ ಸ್ಯಾಂಡಲ್ ವುಡ್ ಗೂ ಕೊರೋನಾ ಭೀತಿ ಆವರಿಸಿದೆ.  
> ಬಾಲಿವುಡ್ ನಲ್ಲಿ ಈಗಾಗಲೇ ಘಟಾನುಘಟಿ ನಟರು ಕೊರೋನಾ ಅಪಾಯಕ್ಕೊಳಗಾಗಿದ್ದಾರೆ. ಅದರಲ್ಲೂ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬವಿಡೀ ಕೊರೋನಾ ಸೋಂಕಿಗೊಳಗಾಗಿದೆ.>   ಇದೀಗ ಸ್ಯಾಂಡಲ್ ವುಡ್ ನಲ್ಲೂ ಕೊರೋನಾ ಭೀತಿ ಶುರುವಾಗಿದೆ. ಲಾಕ್ ಡೌನ್ ಬಳಿಕ ತೆರೆಮರೆಯ ಕೆಲಸಗಳಿಗೆ ಚಾಲನೆ ನೀಡಲಾಗಿತ್ತು. ಶೂಟಿಂಗ್ ಇಲ್ಲದೇ ಹೋದರೂ ಕಲಾವಿದರು, ತಂತ್ರಜ್ಞರು ಸಿನಿಮಾ ಕೆಲಸಗಳಿಗಾಗಿ ಒಟ್ಟು ಸೇರಿದ್ದರು. ಹೀಗಾಗಿ ಕೊರೋನಾ ಭೀತಿ ಹೆಚ್ಚಾಗಿದೆ. ಸುಮಲತಾ ಅಂಬರೀಶ್ ಬಳಿಕ ರಾಕ್ ಲೈನ್ ವೆಂಕಟೇಶ್ ಕೂಡಾ ಆಸ್ಪತ್ರೆ ಸೇರಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಸಣ್ಣನೆಯ ತಲ್ಲಣ ಶುರುವಾಗಿತ್ತು. ಇದೀಗ ಧ್ರುವ ಸರ್ಜಾ ದಂಪತಿಯೂ ಕೊರೋನಾ ಆವರಿಸಿರುವುದಾಗಿ ಸುದ್ದಿ ಹೇಳಿದ್ದು, ಮತ್ತಷ್ಟು ಮಂದಿ ಆತಂಕಕ್ಕೊಳಗಾಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :