‘ಅಧ್ಯಕ್ಷ ಇನ್ ಅಮೆರಿಕಾ’ ರಿಲೀಸ್ ಡೇಟ್ ಫಿಕ್ಸ್! ಸ್ಪೆಷಲ್ ಆಗಿ ಅನೌನ್ಸ್ ಮಾಡಿದ್ರು ಶರಣ್!

ಬೆಂಗಳೂರು| Krishnaveni K| Last Modified ಭಾನುವಾರ, 29 ಸೆಪ್ಟಂಬರ್ 2019 (08:35 IST)
ಬೆಂಗಳೂರು: ಶರಣ್ ನಾಯಕರಾಗಿ ಅಭಿನಯಿಸಿರುವ ಸಿನಿಮಾವೊಂದು ಬಹಳ ದಿನಗಳ ನಂತರ ತೆರೆಗೆ ಬರುತ್ತಿದೆ. ಶರಣ್ ನಾಯಕರಾಗಿರುವ ‘ಅಧ್ಯಕ್ಷ ಇನ್ ಅಮೆರಿಕಾ’ ಸಿನಿಮಾ ಅಕ್ಟೋಬರ್ 4 ರಂದು ಬಿಡುಗಡೆಯಾಗುತ್ತಿದೆ.

 
ಎಲ್ಲಾ ನಾಯಕರು ತಮ್ಮ ಸಿನಿಮಾ ರಿಲೀಸ್ ಡೇಟ್ ನ್ನೂ ಭಾರೀ ಸದ್ದು ಗದ್ದಲಗಳೊಂದಿಗೆ ಮಾಡಿದರೆ, ಶರಣ್ ಮಾತ್ರ ಡಿಫರೆಂಟ್ ಆಗಿ ಮೌನವಾಗಿಯೇ ಮಾಡಿದ್ದಾರೆ.
 
ಕೆಲವು ಪ್ಲೇಕಾರ್ಡ್ ಗಳನ್ನು ಪ್ರದರ್ಶಿಸಿ ತಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಶರಣ‍್ ಸಂದೇಶ ನೀಡುತ್ತಾ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶರಣ್ ಗೆ ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :