ಅಮ್ಮನಾಗುತ್ತಿರುವ ಸಂಭ್ರಮದಲ್ಲಿ ಸಿಂಪಲ್ ಹುಡುಗಿ: ತಾಯ್ತನಕ್ಕೆ ಬಣ್ಣ ತುಂಬಿದ ಶ್ವೇತಾ

ಬೆಂಗಳೂರು| chandralekha| Last Modified ಸೋಮವಾರ, 3 ಜುಲೈ 2017 (08:52 IST)
ಬೆಂಗಳೂರು:ಸ್ಯಾಂಡಲ್ ವುಡ್ ನ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಈಗ ಅಮ್ಮನಾಗುತ್ತಿದ್ದಾರೆ. ತಾಯ್ತನದ ದಿವ್ಯಾನುಭೂತಿಯನ್ನು ಅವರು ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡು ಫೋಟೋ ಶೂಟ್ ಮಾಡಿ ಗಮನಸೆಳೆದಿರುವುದು ವಿಶೇಷ.
 
ಅಮ್ಮನಾಗುತ್ತಿರುವ ಗಳಿಗೆಯನ್ನು ಸಂಭ್ರಮಿಸುತ್ತಿರುವ ಸ್ವೇತಾ ತಮ್ಮ ತಾಯ್ತನಕ್ಕೆ ಬಣ್ಣ ತುಂಬಿದ್ದಾರೆ. ಹೌದು. ಪ್ರಗ್ನೆನ್ಸಿಯಲ್ಲಿ ಹೀಗೆ ಬೆಲ್ಲಿ ಪೇಂಟಿಂಗ್ ಮಾಡಿ ಫೋಟೋ ಶೂಟ್ ಮಾಡಿಸಿಕೊಂಡ ಮೊದಲ ನಟಿ ಶ್ವೇತಾ ಶ್ರೀವಾತ್ಸವ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
 
ಶ್ವೇತಾ ಹೇಳುವ ಪ್ರಕಾರ ಒಂದು ನೈಸರ್ಗಿಕ ಪ್ರಕ್ರಿಯೆ. ಇದರಲ್ಲಿ ಮುಚ್ಚುಮರೆಯೇಕೆ ಯಾರೇನೆ ಎಂದರೂ ತಲೆಕೆಡಿಸಿಕೊಲ್ಳದೇ ಆತ್ಮವಿಶ್ವಾಸದಿಂದಿರಬೇಕು. ಒಬ್ಬ ಕಲಾವಿದೆಯಾಗಿ, ಬಸಿರಿನ ಬಗ್ಗೆ ಅರಿವು ಮೂಡಿಸುವುದು ನನ್ನ ಜವಾಬ್ದಾರಿ. ಹೊಟ್ಟೆ ತೋರಿಸಿದರೆ ದೃಷ್ಟಿಯಾಗುತ್ತದೆ ಎನ್ನುವುದು, ಕೆಲ ಮಡಿವಂತಿಕೆಯ ಪೂರ್ವಾಗ್ರಹ ಇದೆ. ಇದರ ವಿರುದ್ಧ ಜಾಗೃತಿ ಮೂಡಿಸುವುದು ನನ್ನ ಉದ್ದೇಶ. ಎಂದು ಹೇಳುತ್ತಾರೆ.
 
ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರಿಂದ ಪುಟ್ಟ ಬುದ್ಧನಂತೆ ಕಾಣುವ ಏಂಜೆಲ್ ಮಗುವಿನ ಚಿತ್ರವನ್ನು ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ. ಪತಿ ಅಮಿತ್ ಶ್ರೀವಾತ್ಸವ ಬೆಂಬಲವೂ ಇವರ ಬಯಕೆಗಿದೆಯಂತೆ.ಬೆಲ್ಲಿ ಪೇಂಟಿಂಗ್ ಮಾಡಿಸಿಕೊಳ್ಳುವ ಬಗ್ಗೆ ಮೊದಲು ಯೋಚಿಸಿದ್ದೇ ಅಮಿತ್ ಅಂತೆ. ನನ್ನೆಲ್ಲಾ ಆಸೆಗಳಿಗೆ ಪ್ರೋತ್ಸಾಹ ನೀಡುತ್ತಾರೆ ಅಮಿತ್ ಎಂಬುದು ಶ್ವೇತಾ ಸಂಭ್ರಮ.
 


ಇದರಲ್ಲಿ ಇನ್ನಷ್ಟು ಓದಿ :