ರಿಯಲ್ ಎಸ್ಟೇಟ್ ಕಂಪೆನಿಯಿಂದ ಕೋಟಿಗಟ್ಟಲೆ ಹಣ ವಂಚನೆಗೆ ಒಳಗಾದ ದಕ್ಷಿಣ ಭಾರತದ ಖ್ಯಾತ ನಟಿಯರು

ಚೆನ್ನೈ| pavithra| Last Modified ಗುರುವಾರ, 30 ಜುಲೈ 2020 (10:50 IST)

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿಯರಾದ ನಯನತಾರಾ, ರಮ್ಯಾಕೃಷ್ಣ ಸೇರಿ ದೇಶದ ಕೆಲವು ಸೆಲೆಬ್ರಿಟಿಗಳು ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿಯಿಂದ ಕೋಟಿಗಟ್ಟಲೆ ವಂಚನೆಗೆ ಒಳಗಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿಯೊಂದು ದೇಶದ ವಿವಿಧ ವಿವಿಐಪಿಗಳಿಂದ ಕೋಟಿಗಟ್ಟಲೆ ಹಣ ಪಡೆದು ಅತ್ಯುತ್ತಮ ಸೌಲಭ್ಯವಿರುವ ಹಲವಾರು ಎಕರೆ ಭೂಮಿಯನ್ನು ಅವರಿಗೆ  ನೀಡಿದೆ. ಆದರೆ ಕಂಪೆನಿಯೊಳಗಿನ ಜಗಳದಿಂದ ಈಗ ಕಂಪೆನಿಯ ವಂಚನೆ ಬೆಳಕಿಗೆ ಬಂದಿದ್ದು, ಕಂಪೆನಿ ಮಾಡಿದ ಭೂಮಿ ಕೃಷಿ ಭೂಮಿಯಾಗಿದ್ದು, ಇಲ್ಲಿ ಕಟ್ಟಡ ನಿರ್ಮಾಣದಂತೆ ಸರ್ಕಾರ ತಡೆಯೊಡ್ಡಿದೆ.

ಅಲ್ಲದೇ ಕಂಪೆನಿಯು ಒಂದು ಎಕರೆ ಭೂಮಿಗೆ 1 ಲಕ್ಷ ರೂ ನೀಡಿ ವಿವಿಐಪಿಗಳಿಗೆ ಕೋಟಿ ರೂ ಗೆ ಮಾರಾಟ ಮಾಡಿದೆ ಎನ್ನಲಾಗಿದೆ. ಈ ವಿವಿಐಪಿಗಳಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯರಾದ ನಯನತಾರಾ, ರಮ್ಯಾಕೃಷ್ಣ, ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ತೆಂಡೂಲ್ಕರ್ ಕೂಡ ಇದ್ದಾರೆ ಎಂಬುದಾಗಿ ತಿಳಿದುಬಂದಿದೆ.

 
ಇದರಲ್ಲಿ ಇನ್ನಷ್ಟು ಓದಿ :