ಮೇಘನಾ ಸರ್ಜಾ-ಸೃಜನ್ ಹೊಸ ಸಿನಿಮಾಗೆ ವಿಚಿತ್ರ ಟೈಟಲ್!

ಬೆಂಗಳೂರು| Krishnaveni K| Last Modified ಸೋಮವಾರ, 9 ಸೆಪ್ಟಂಬರ್ 2019 (10:33 IST)
ಬೆಂಗಳೂರು: ನಟಿ ಮೇಘನಾ ಸರ್ಜಾ ಸಿನಿಮಾ ಸೃಜನ್ ಲೋಕೇಶ್ ಜತೆಗೆ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವ ಸುದ್ದಿ ಸುದ್ದಿ ಹಲವು ದಿನಗಳ ಹಿಂದೆಯೇ ಗೊತ್ತಾಗಿತ್ತು.

 
ಆದರೆ ಈ ಸಿನಿಮಾಗೆ ಟೈಟಲ್ ಇಟ್ಟಿರಲಿಲ್ಲ. ಈಗ ಟೈಟಲ್ ಫಿಕ್ಸ್ ಆಗಿದ್ದು, ಇದುವೇ ಕ್ರಿಯೇಟಿವ್ ಆಗಿದೆ. ಈ ಹೊಸ ಸಿನಿಮಾದ ಟೈಟಲ್ ‘ಸೆಲ್ಫೀ ಮಮ್ಮೀ, ಗೂಗಲ್ ಡ್ಯಾಡಿ’ ಎಂದು!
 
ಹೆಸರೇ ಇಷ್ಟು ವಿಶೇಷವಾಗಿದೆ ಎಂದು ನಿಮಗನಿಸಬಹುದು. ನಾಲ್ಕು ತಿಂಗಳ ಕಾಲ ಹುಡುಕಾಟ ನಡೆಸಿ ಕೊನೆಗೂ ಚಿತ್ರತಂಡ ಈ ಟೈಟಲ್ ಫಿಕ್ಸ್ ಮಾಡಿದೆಯಂತೆ. ಉಳಿದ ಡೀಟೈಲ್ಸ್ ಸದ್ಯದಲ್ಲೇ ಗೊತ್ತಾಗಲಿದೆ ಎಂದಿದ್ದಾರೆ ಮೇಘನಾ.
ಇದರಲ್ಲಿ ಇನ್ನಷ್ಟು ಓದಿ :