ಸ್ಟಾರ್ ನಟಿಯರ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಇವರೇ ಕಾರಣ!

ಬೆಂಗಳೂರು| Krishnaveni K| Last Modified ಭಾನುವಾರ, 4 ಜುಲೈ 2021 (09:12 IST)
ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳ ಬಗ್ಗೆ ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅವರನ್ನೂ ಕಿರಿ ವಯಸ್ಸಿನಲ್ಲೇ ಸ್ಟಾರ್ ಮಾಡುತ್ತಿದ್ದಾರೆ.  
> ಮಕ್ಕಳು ಹುಟ್ಟಿದ ಗಳಿಗೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳ ಹೆಸರಿನಲ್ಲಿ ಪ್ರತ್ಯೇಕ ಪೇಜ್ ತೆರೆದು ಅವರ ವಿಡಿಯೋಗಳನ್ನು ಪ್ರಕಟಿಸುವುದರ ಜೊತೆಗೆ ಬೇಬಿ ಪ್ರಾಡಕ್ಟ್ ಗಳ ಬಗ್ಗೆ ಪ್ರಮೋಷನ್ ಕೂಡಾ ಮಾಡುತ್ತಿರುತ್ತಾರೆ.>   ಸ್ಯಾಂಡಲ್ ವುಡ್ ನಲ್ಲಿ ಇಂತಹದ್ದೊಂದು ಟ್ರೆಂಡ್ ಹುಟ್ಟು ಹಾಕಿದ್ದು ನಟಿ ಶ್ವೇತಾ ಶ್ರೀವಾತ್ಸವ ಎಂದೇ ಹೇಳಬಹುದು. ಅವರು ಗರ್ಭಿಣಿಯಾಗಿದ್ದಾಗ ಫೋಟೋ ಶೂಟ್ ಮಾಡಿಸಿ ತಮ್ಮ ತಾಯ್ತನದ ಸಂಭ್ರಮವನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ತಮ್ಮ ಮಗಳ ವಿಡಿಯೋಗಳನ್ನು ಆಗಾಗ ಪ್ರಕಟಿಸುತ್ತಾ ನೆಟ್ಟಿಗರಿಗೆ ಪುಳಕ ಕೊಡುತ್ತಿದ್ದರು. ಇದಾದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಇಂತಹದ್ದೊಂದು ಟ್ರೆಂಡೇ ಸೃಷ್ಟಿಯಾಯಿತು. ಅದಾದ ಬಳಿಕ ರಾಧಿಕಾ ಪಂಡಿತ್ ಮಗಳು ಐರಾ ವಿಡಿಯೋಗಳು ಭಾರೀ ಜನಪ್ರಿಯವಾದವು. ಈಗಲೂ ರಾಧಿಕಾ-ಯಶ್ ಜೋಡಿಯ ಮಕ್ಕಳು ತಮ್ಮ ಪೋಷಕರಷ್ಟೇ ಜನಪ್ರಿಯರು.
 
ಇದಗೀ ಬಹುತೇಕ ಎಲ್ಲಾ ಹಿರಿತೆರೆ, ಕಿರುತೆರೆ ನಟ-ನಟಿಯರ ಮಕ್ಕಳು ತಮ್ಮ ಮಕ್ಕಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಪುಟ ತೆರೆಯುವುದು ಫ್ಯಾಶನ್ ಆಗಿಬಿಟ್ಟಿದೆ. ಇದನ್ನೇ ಜನಸಾಮಾನ್ಯರೂ ಫಾಲೋ ಮಾಡುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :