ರಾಣಾ ದಗ್ಗುಬಾಟಿ 'ವಿರಾಟಪರ್ವಂ’ ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆ

ಹೈದರಾಬಾದ್| pavithra| Last Updated: ಶನಿವಾರ, 30 ಜನವರಿ 2021 (10:26 IST)
ಹೈದರಾಬಾದ್ : ವೇಣು ಉಡುಗುಲಾ ನಿರ್ದೇಶನದ ನಟ ರಾಣಾ ದಗ್ಗುಬಾಟಿ ಹಾಗೂ ಸಾಯಿ ಪಲ್ಲವಿ ಜೊತೆಯಾಗಿ ನಟಿಸಿದ ‘ವಿರಾಟಪರ್ವಂ’  ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
1990ರ ನಕ್ಸಲೈಟ್ಸ್ ಹಿನ್ನಲೆಯಲ್ಲಿ ರೂಪುಗೊಂಡಿರುವ ಈ ಚಿತ್ರದ ಏಪ್ರಿಲ್ 30ರಂದು ಬಿಡುಗಡೆಯಾಗಲಿದೆಯಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಹಾಗೇ ಈ ವೇಳೆ ನಕ್ಸಲೈಟ್ ಗೆಟಪ್ ನಲ್ಲಿ ರಾಣಾ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.> > ಈ ಚಿತ್ರವನ್ನು ಎಸ್ ಎಲ್ ವಿ ಸಿನಿಮಾಸ್ ಬ್ಯಾನರ್ ನಲ್ಲಿ ಸುಧಾಕರ್ ನಿರ್ಮಿಸುತ್ತಿದ್ದಾರೆ, ಈ ಚಿತ್ರದಲ್ಲಿ ಪ್ರಿಯಮಣಿ, ನಿವೇತಾ ಪೆತುರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :