ಸುಶಾಂತ್ ಸಿಂಗ್ ರಿಂದ ರಿಯಾ ಚಕ್ರವರ್ತಿ ಎಗರಿಸಿದ್ದು 17 ಕೋಟಿ ರೂ.?

ಮುಂಬೈ| Jagadeesh| Last Modified ಬುಧವಾರ, 29 ಜುಲೈ 2020 (21:30 IST)
ಸುಶಾಂತ್ ಸಿಂಗ ರಜಪೂತ್ ರಿಂದ ಪ್ರೇಯಸಿ ರಿಯಾ ಚಕ್ರವರ್ತಿ ಎಗರಿಸಿದ್ದು ಬರೋಬ್ಬರಿ 17 ಕೋಟಿಗೂ ಅಧಿಕ ಹಣ ಎನ್ನಲಾಗುತ್ತಿದೆ.

ರಿಯಾ ಚಕ್ರವರ್ತಿಯು ಬಾಲಿವುಟ್ ನಟ ಸುಶಾಂತ್ ಸಿಂಗ್ ರಜಪೂತ್‌ಗೆ 17 ಕೋಟಿ ರೂ.ಗಳನ್ನು ವಂಚಿಸಿದ್ದಾರೆ. ವಿದೇಶಿ ಪ್ರವಾಸಗಳಿಗೆ ಕ್ರೆಡಿಟ್ ಕಾರ್ಡ್ ಬಳಸಿದ್ದಾರೆ ಎನ್ನಲಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ತಂದೆಯ ದೂರಿನ ಮೇರೆಗೆ  ನಟಿ ರಿಯಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 306, 341, 342, 380, 406 ಮತ್ತು 420 ರ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸುಶಾಂತ್ ಅವರ ತಂದೆ ಸಲ್ಲಿಸಿದ ಎಫ್‌ಐಆರ್‌ನಲ್ಲಿ ರಿಯಾ ಚಕ್ರವರ್ತಿ, ಅವರ ತಂದೆ, ತಾಯಿ, ಸಹೋದರಿ, ಸಹೋದರ ಮತ್ತು ಅವರ ವ್ಯವಸ್ಥಾಪಕರ ಹೆಸರನ್ನು ಸೇರಿಸಲಾಗಿದೆ. ಸುಶಾಂತ್‌ಗೆ ಕಿರುಕುಳ ಮತ್ತು ವಂಚನೆ ಮಾಡಿದ ಆರೋಪ ಅವರ ಮೇಲಿದೆ.


ಇದರಲ್ಲಿ ಇನ್ನಷ್ಟು ಓದಿ :