ಮಹೇಶ್ ಬಾಬು ಅವರ ಜೊತೆ ಚಿತ್ರ ಮಾಡಲು ಹೊರಟ ತ್ರಿವಿಕ್ರಮ್

ಹೈದರಾಬಾದ್| pavithra| Last Modified ಭಾನುವಾರ, 2 ಮೇ 2021 (06:51 IST)
ಹೈದರಾಬಾದ್ : ತ್ರಿವಿಕ್ರಮ್ ಶ್ರೀನಿವಾಸ್ ಅವರು ನಟ ಜೂನಿಯರ್ ಎನ್ ಟಿಆರ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಎಂದು ಈ ಹಿಂದೆ ಹೇಳಲಾಗಿತ್ತು.  ಆದರೆ ಇತ್ತೀಚಿನ ಮಾಹಿತಿ ಪ್ರಕಾರ ತ್ರಿವಿಕ್ರಮ್ ಮತ್ತು ಮಹೇಶ್ ಬಾಬು ಅವರ  ಜೊತೆ ಸಿನಿಮಾ ಮಾಡಲಿದ್ದಾರಂತೆ.

ಈ ಹಿಂದೆ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಇಬ್ಬರೂ ಅಥಾಡು ಮತ್ತು ಖಲೇಜಾ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಇವರಿಬ್ಬರು ಸೇರಿ ಮೂರನೇ ಪ್ರಾಜೆಕ್ಟ್ ಮಾಡಲಿದ್ದಾರಂತೆ. ಇದೀಗ ತ್ರಿವಿಕ್ರಮ್ ಅವರು ಮಹೇಶ್ ಬಾಬು ಅಭಿನಯದ ಚಿತ್ರಕಥೆಯ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದನ್ನು ಹಾರಿಕಾ ಮತ್ತು ಹಸೈನ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣ ಮಾಡಲಿದ್ದಾರೆ. ತ್ರಿವಿಕ್ರಮ್ ಅವರು ಈ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂಬ ವರದಿಗಳು ಕೇಳಿಬಂದಿದೆ.ಇದರಲ್ಲಿ ಇನ್ನಷ್ಟು ಓದಿ :