ಲಾಕ್ ಡೌನ್ ತೆರವಾದರೂ ಚಿತ್ರರಂಗಕ್ಕೆ ಸಿಗದು ಸಿಹಿ ಸುದ್ದಿ

ಬೆಂಗಳೂರು| Krishnaveni K| Last Modified ಮಂಗಳವಾರ, 8 ಜೂನ್ 2021 (09:02 IST)
ಬೆಂಗಳೂರು: ಲಾಕ್ ಡೌನ್ ತೆರೆಯಲು ಇನ್ನು ಒಂದು ವಾರ ಬಾಕಿಯಿದೆ. ಅದಾದ ಬಳಿಕ ರಾಜ್ಯ ಸರ್ಕಾರ ಅನ್ ಲಾಕ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಹಾಗಿದ್ದರೂ ಚಿತ್ರರಂಗಕ್ಕೆ ಸಿಹಿ ಸುದ್ದಿ ಸಿಗದು.

 
ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅನುಮತಿ ಸಿಗುವುದು ಚಿತ್ರ ನಿರ್ಮಾಪಕರ ಬೇಡಿಕೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಸರ್ಕಾರ ಒಂದೇ ಬಾರಿಗೆ ಶೇ.100 ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ‍್ಯತೆ ಕಡಿಮೆ.
 
ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡುವ ಸಾಧ್ಯತೆಯೇ ಕಡಿಮೆ. ಒಂದು ವೇಳೆ ತೆರೆಯಲು ಅವಕಾಶ ಸಿಕ್ಕರೂ ಶೇ. 50 ಪ್ರೇಕ್ಷಕರ ಉಪಸ್ಥಿತಿಗೆ ಮಾತ್ರ ಅವಕಾಶ ಸಿಕ್ಕೀತು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರ ನಿರ್ಮಾಪಕರ ಕಷ್ಟ ಮುಗಿಯುವಂತೆ ಕಾಣುತ್ತಿಲ್ಲ.
ಇದರಲ್ಲಿ ಇನ್ನಷ್ಟು ಓದಿ :