ಕೈ ಎತ್ತಿದ್ದಕ್ಕೆ ಕ್ಷಮೆ ಕೇಳಿದ ವೈಷ್ಣವಿ: ಅವಮಾನ ಆಯ್ತು ಎಂದ ಪ್ರಶಾಂತ್ ಸಂಬರಗಿ..!

Bangalore| Ramya kosira| Last Modified ಬುಧವಾರ, 21 ಜುಲೈ 2021 (09:57 IST)
ವೈಷ್ಣವಿ ಅವರು ಸೆಕೆಂಡ್ ಇನ್ನಿಂಗ್ಸ್ನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಪರಶಾಂತ್ ಸಂಬರಗಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದರು. ವೈಷ್ಣವಿ ಅವರ ಮನೆಯಲ್ಲಿ ಪ್ರಶಾಂತ್ ಅವರು ನೇರವಾಗಿ ಇದ್ದದ್ದನ್ನು ಇದ್ದ ಹಾಗೇ ಹೇಳುತ್ತಾರೆ. ಅವರೊಂದಿಗೆ ಜಗಳ ಮಾಡಿಕೊಳ್ಳಬೇಡ ಎಂದು ಹೇಳಿದ್ದರಂತೆ. ಈ ಬಗ್ಗೆ ವೈಷ್ಣವಿ ಅವರು ಸುದೀಪ್ ಅವರ ಬಳಿ ಹೇಳಿಕೊಂಡಿದ್ದರು.
ಬಿಗ್ ಬಾಸ್ ಮನೆಯಲ್ಲೂ ಸಹ ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಆತ್ಮೀಯವಾಗಿದ್ದಾರೆ. ಆದರೆ ಇಂದು ನಡೆದ ಏನಾಗಲಿ ಮುಂದೆ ಓಡು ನೀ ಟಾಸ್ಕ್ನಲ್ಲಿ ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಅವರ ನಡುವೆ ಮನಸ್ತಾಪವಾಗಿದೆ. ಜೊತೆಗೆ ಆಡುವ ಬರದಲ್ಲಿ ವೈಷ್ಣವಿ ಸಿಟ್ಟಿಗೆದ್ದು ಪ್ರಶಾಂತ್ ಸಂಬರಗಿ ಅವರ ಮೇಲೆ ಕೈ ಎತ್ತಿದ್ದಾರೆ. ಆದರೆ ಪ್ರಶಾಂತ್ ಸಂಬರಗಿ ಮಾತ್ರ ಸಿಟ್ಟಾಗದೆ ತಾಳ್ಮೆಯಿಂದ ವೈಷ್ಣವಿ ಬಳಿ  ಮಾತನಾಡುತ್ತಾರೆ.

ಆದರೆ, ವೈಷ್ಣವಿ ಇದೇ ಮೊದಲ ಸಲ ತಾಳ್ಮೆ ಕಳೆದುಕೊಂಡು ಪ್ರಶಾಂತ್ ಸಂಬರಗಿ ಮೇಲೆ ಕೈ ಎತ್ತುತ್ತಾರೆ. ಆದರೆ ನಂತರ ಸಿಟ್ಟನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ಮುಂದುವರೆಸುವುದಿಲ್ಲ. ಜೊತೆಗೆ ಆಟದಿಂದ ಹೊರ ನಡೆದು ಶುಭಾ ಪೂಂಜಾ ಅವರ ಬಳಿ ಪ್ರಶಾಂತ್ ಅವರು ಆಡಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಜೊತೆಗೆ ಜಂಟಲ್ಮೆನ್ ಎಂದು ಹೇಳಿಕೊಂಡು ಹೀಗೆಲ್ಲ ಆಡುತ್ತಾರೆ ಎಂದು ಆರೋಪಿಸುತ್ತಾರೆ.
ಇನ್ನು, ಆಟ ಮುಗಿದು ಎಲ್ಲರೂ ಮನೆಯಲ್ಲಿ ವಿಶ್ರಾಂತಿ ಮಾಡುವಾಗ ಪ್ರಶಾಂತ್ ಅವರ ಬಳಿ ಬರುವ ವೈಷ್ಣವಿ, ನಾನು ಕೈ ಎತ್ತಬಾರದಿತ್ತು. ಕ್ಷಮಿಸಿ... ಇದನ್ನು ಮುಂದೆ ನಾನು ಕ್ಯಾರಿ ಮಾಡುವಿಲ್ಲ. ಇಲ್ಲಿಗೆ ಬಿಟ್ಟು ಬಿಡುತ್ತೇನೆ ಎನ್ನುತ್ತಾರೆ. ಆದರೆ ಈ ವಿಷಯವಾಗಿ ಚಕ್ರವರ್ತಿ ಅವರ ಬಳಿ ತಮಗಾದ ನೋವಿನ ಬಗ್ಗೆ ಪ್ರಶಾಂತ್ ಹೇಳಿಕೊಳ್ಳುತ್ತಾರೆ. ಒಂದು ಹುಡುಗಿ ಗಂಡಸಿನ ಮೇಲೆ ಮ ಕೈ ಎತ್ತುವುದು ಅಂದರೆ ಅದು ನನಗಾದ ಅವಮಾನ. ಅದಕ್ಕೆ ನಾನು ಏನು ಮಾತನಾದೆ ಬಿಟ್ಟು ಬಿಟ್ಟೆ. ವೈಷ್ಣವಿ ಬಗ್ಗೆ ನನಗೆ ಗೌರವಿದೆ. ಆದರೆ ಬೇಸರವಾಯಿತು ಎನ್ನುತ್ತಾರೆ.
ಈ ಘಟನೆ ನಂತರ ಇನ್ನು ಮುಂದೆ ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಹಾಗೂ ವೈಷ್ಣವಿ ನಡುವಿನ ಆತ್ಮೀಯತೆ ಹಾಗೆ ಇರುತ್ತಾ ಅಥವಾ ಅವರ ಸ್ನೇಹದಲ್ಲಿ ಉಂಟಾಗಿರುವ ಬಿರುಕು ದೊಡ್ಡದಾಗುತ್ತಾ ಅನ್ನೋದು ಮುಂದಿನ ಸಂಚಿಕೆಗಳಿಂದ ತಿಳಿಯಲಿದೆ.
ಏನಿದು ಘಟನೆ?
ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಅರ್ಹತೆ ಪಡೆಯಲು ಬಿಗ್ ಬಾಸ್ ನೀಡಿರುವ ನಾನಾ ನೀನಾ ಟಾಸ್ಕ್ನಲ್ಲಿ ಅಂಕಗಳಿಸಲು ಬಿಗ್ ಬಾಸ್ ನೀಡಿದ ಏನಾಗಲಿ ಮುಂದೆ ಓಡು ನೀ... ಟಾಸ್ಕ್ನಲ್ಲಿ ಎಲ್ಲ ಸ್ಪರ್ಧಿಗಳು ಬೆನ್ನಿಗೆ ಗೋಣಿ ಚೀಲ ಕಟ್ಟಿಕೊಂಡು ಹಾಕಿರುವ ವೃತ್ತದಲ್ಲಿ ಓಡಬೇಕು. ಓಡುವಾಗ ಹಿಂದೆ ಇರುವ ಸ್ಪರ್ಧಿ ನಿಮ್ಮ ಬೆನ್ನಿಗೆ ಕಟ್ಟಿರುವ ತುಂಬಿರುವ ಚೀಲವನ್ನು ಖಾಲಿ ಮಾಡುತ್ತಾರೆ. ಹೀಗೆ ಯಾರ ಚೀಲ ಮೊದಲು ಖಾಲಿ ಆಗುತ್ತದೆಯೋ ಅವರು ಆಟದಿಂದ ಹೊರ ಹೋಗುತ್ತಾರೆ.
ಹೀಗೆ ಆಟವಾಡುವಾಗ ಪ್ರಶಾಂತ್ ಸಂಬರಗಿ ಅವರು ವೈಷ್ಣವಿ ಅವರ ಚೀಲದಲ್ಲಿರುವ ವಸ್ತುವನ್ನು ಖಾಲಿ ಮಾಡಲುಯತ್ನಿಸುತ್ತಾರೆ. ಈ ವೇಳೆ ವೈಷ್ಣವಿ ಅವರು ಪ್ರಶಾಂತ್ ಅವರ ಮೇಲೆ ಕೂಗೂತ್ತಾರೆ. ಜೊತೆಗೆ ತಾಳ್ಮೆ ಕಳೆದುಕೊಂಡು ಕೈ ಎತ್ತುತ್ತಾರೆ. ಆದರೆ ಅದನ್ನು ಮುಂದುವರೆಸುವುದಿಲ್ಲ. ನಂತರ ಸಿಟ್ಟಿನಿಂದ ಆಟದಿಂದ ಹೊರಗೆ ಹೋಗಿ ಕುಳಿತುಕೊಳ್ಳುತ್ತಾರೆ. ನಂತರ ಕ್ಯಾಪ್ಟನ್ ದಿವ್ಯಾ ಸುರೇಶ್ ಅವರು ವೈಷ್ಣವಿಗೆ ಸಮಾಧಾನ ಮಾಡಿ ಮತ್ತೆ ಆಡುವಂತೆ ಮಾಡುತ್ತಾರೆ. ಆದರೆ ಈ ಆಟದಲ್ಲಿ ವೈಷ್ಣವಿ ತಾಳ್ಮೆ ಕಳೆದುಕೊಂಡ ರೀತಿ ಕಂಡು ವೀಕ್ಷಕರು ಶಾಕ್ ಆಗಿದ್ದಾರೆ.
ಈ ಟಾಸ್ಕ್ ಆಡುವಾಗ ವೈಷ್ಣವಿ ಅವರು ಚಕ್ರವರ್ತಿ ಅವರು ಬೆನ್ನಿಗೆ ಹಾಕಿಕೊಂಡಿರುವ ಚೀಲ ಹಿಡಿದುಕೊಂಡು ಜೋತು ಬೀಳುತ್ತಾರೆ. ಈ ಆಟದಲ್ಲಿ ವಿಶ್ರಾಂತಿ ಕೊಟ್ಟಾಗ ಚಕ್ರವರ್ತಿ ಅರಾಮಾಗಿ ಆಟವಾಡಮ್ಮ ಎಂದಾಗ ವೈಷ್ಣವಿ ಚಕ್ರವರ್ತಿ ಅವರಿಗೆ ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದಾರೆ. ಇನ್ನು, ಇದೇ ಟಾಸ್ಕ್ನಲ್ಲಿ ಮಂಜು ಹಾಗೂ ಅರವಿಂದ್ ನಡುವೆ ಮಾತಿನ ಚಕಮಕಿ ಆಗುತ್ತದೆ. ಅಂತೆಯೇ ಚಕ್ರವರ್ತಿ ಚಂದ್ರಚೂಡ ಹಾಗೂ ಶಮಂತ್ ಗೌಡ ಕಿತ್ತಾಡಿಕೊಳ್ಳುತ್ತಾರೆ
 
ಇದರಲ್ಲಿ ಇನ್ನಷ್ಟು ಓದಿ :