ಹಿರಿಯ ನಟಿ ಜಯಂತಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಬೆಂಗಳೂರು| Krishnaveni K| Last Modified ಬುಧವಾರ, 8 ಜುಲೈ 2020 (10:34 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಂತಿ ಅನಾರೋಗ್ಯಕ್ಕೀಡಾಗಿದ್ದು ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊರೋನಾ ತಗುಲಿಲ್ಲ ಎಂದು ಪುತ್ರ ಕೃಷ್ಣ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದ್ದು, ಗಾಬರಿ ಪಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ಉಸಿರಾಟ ಸಂಬಂಧೀ ಸಮಸ್ಯೆಯಿಂದಾಗಿ ಜಯಂತಿ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದರಲ್ಲಿ ಇನ್ನಷ್ಟು ಓದಿ :