ವೋಟ್ ಹಾಕಲು ಬೈಸಿಕಲ್ ನಲ್ಲಿ ಬಂದ ನಟ ವಿಜಯ್. ಕಾರಣವೇನು ಗೊತ್ತಾ?

ಚೆನ್ನೈ| pavithra| Last Modified ಬುಧವಾರ, 7 ಏಪ್ರಿಲ್ 2021 (10:45 IST)
ಚೆನ್ನೈ : ನಿನ್ನೆ ತಮಿಳುನಾಡಿನ ಚುನಾವಣೆ ನಡೆದಿದ್ದು, ಹಲವಾರು ಚಿತ್ರರಂಗದ ತಾರೆಯರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ.

ಆ ವೇಳೆ ಕಾಲಿವುಡ್ ನ ಸ್ಟಾರ್ ನಟ ದಳಪತಿ ವಿಜಯ್ ಅವರು ಬೈಸಿಕಲ್ ಮೂಲಕ ಸವಾರಿ ಮಾಡುವುದರ ಮೂಲಕ ಚುನಾವಣಾ ಕೇಂದ್ರಕ್ಕೆ ಬಂದು ತಮ್ಮ ಚಲಾಯಿಸಿದ್ದಾರೆ. ಸ್ಟಾರ್ ನಟರಾಗಿ ವಿಜಯ್ ಬೈಸಿಕಲ್ ನಲ್ಲಿ ಬಂದಿರುವುದನ್ನು ಕಂಡು ಜನರು ಆಶ್ಚರ್ಯಗೊಂಡರು ಮತ್ತು  ಅವರನ್ನು ಹುರಿದುಂಬಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ವಿರೋಧಿಸಿ ನಟ ವಿಜಯ್ ಬೈಸಿಕಲ್ ಸವಾರಿ ಮಾಡಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :