Widgets Magazine

ವಾಲೆಂಟೈನ್ಸ್ ಡೇ ದಿನ ನಟ ವಿಜಯ್ ಸೂರ್ಯ ಕೊಟ್ಟ ಸುದ್ದಿಗೆ ಅಭಿಮಾನಿಗಳು ಫುಲ್ ಶಾಕ್

ಬೆಂಗಳೂರು| Krishnaveni K| Last Modified ಶನಿವಾರ, 15 ಫೆಬ್ರವರಿ 2020 (10:22 IST)
ಬೆಂಗಳೂರು: ಕಿರುತೆರೆಯ ಖ್ಯಾತ ನಟ, ಹೆಂಗಳೆಯರ ಮೆಚ್ಚಿನ ನಟ ವಾಲೆಂಟೈನ್ಸ್ ಡೇ ದಿನವಾದ ನಿನ್ನೆ ಕೊಟ್ಟ ಸುದ್ದಿಗೆ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.

 
ಕಳೆದ ವರ್ಷ ವಾಲೆಂಟೈನ್ಸ್ ಡೇ ದಿನವೇ ವಿಜಯ್ ಚೈತ್ರಾ ಜತೆಗೆ ವಿವಾಹವಾಗಿದ್ದರು. ಹೀಗಾಗಿ ಈ ಜೋಡಿಗೆ ಇದು ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ. ಆದರೆ ಅದರ ಜತೆಗೆ ತಮಗೆ ಗಂಡು ಮಗುವಾಗಿರುವ ವಿಚಾರವನ್ನು ಹೇಳಿ ವಿಜಯ್ ಶಾಕ್ ನೀಡಿದ್ದಾರೆ.
 
ವಾಲೆಂಟೈನ್ಸ್ ಡೇ ವಿಶ್ ಜತೆಗೆ ಜನವರಿ 1 ರಂದು ತಮಗೆ ಗಂಡು ಮಗುವಾಗಿದೆ ಎಂಬ ಅಚ್ಚರಿಯ ಸಂಗತಿಯನ್ನು ತಡವಾಗಿ ಬಹಿರಂಗಪಡಿಸಿದ್ದಾರೆ. ಇದುವರೆಗೆ ಎಲ್ಲೂ ವಿಜಯ್ ದಂಪತಿಗೆ ಮಗುವಾಗಿರುವ ಗುಟ್ಟಾಗಿಯೇ ಇತ್ತು. ಇದೀಗ ಇದ್ದಕ್ಕಿದ್ದಂತೆ ಮಗುವಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿ ಕಾಮೆಂಟ್ ಮಾಡಿರುವ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :