ವಿನಯ್ ರಾಜ್ ಕುಮಾರ್ ಹೊಸ ಚಿತ್ರದ ಮುಹೂರ್ತಕ್ಕೆ ರಕ್ಷಿತ್ ಶೆಟ್ಟಿ ಅತಿಥಿ

ಬೆಂಗಳೂರು| Krishnaveni K| Last Modified ಸೋಮವಾರ, 9 ಸೆಪ್ಟಂಬರ್ 2019 (09:41 IST)
ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ ಮುಹೂರ್ತ ನಿನ್ನೆ ನಡೆದಿದ್ದು, ರಕ್ಷಿತ್ ಶೆಟ್ಟಿ ಅತಿಥಿಯಾಗಿ ಆಗಮಿಸಿದ್ದಾರೆ.

 
ರಾಘವೇಂದ್ರ ರಾಜ್ ಕುಮಾರ್ ಬಾಕ್ಸರ್ ಆಗಿ ಈ ಸಿನಿಮಾದಲ್ಲಿ ಮಿಂಚಲಿದ್ದಾರೆ. ಅನಂತ್ ವರ್ಸಸ್ ನುಸ್ರತ್ ಸಿನಿಮಾ ಬಳಿಕ ರಾಘವೇಂದ್ರ ರಾಜ್ ಕುಮಾರ್ ರ ಮತ್ತೊಂದು ಸಿನಿಮಾ ಇದಾಗಿದೆ.
 
ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಬಂದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಕುಟುಂಬ ವರ್ಗವೇ ಹಾಜರಿತ್ತು. ಈ ಚಿತ್ರವನ್ನು ಕರಮ್ ಚಾವ್ಲಾ ನಿರ್ದೇಶನ ಮಾಡುತ್ತಿದ್ದಾರೆ. ಟೈಟಲ್ ಇನ್ನೂ ಅಂತಿಮವಾಗಿಲ್ಲ.
ಇದರಲ್ಲಿ ಇನ್ನಷ್ಟು ಓದಿ :