ರಕ್ಷಿತ್ ಶೆಟ್ಟಿ ಚಾರ್ಲಿಗೆ ಮಲಯಾಳಂ ಗಾಯಕ ವಿನೀತ್ ಧ್ವನಿ

ಬೆಂಗಳೂರು| Krishnaveni K| Last Modified ಗುರುವಾರ, 3 ಜೂನ್ 2021 (09:24 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ಸಿನಿಮಾ ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೆ ಈಗ ಮಲಯಾಳಂ ಖ್ಯಾತ ಗಾಯಕ ವಿನೀತ್ ಶ್ರೀನಿವಾಸನ್ ಧ್ವನಿ ನೀಡಿದ್ದಾರೆ.
 > ಚಾರ್ಲಿ ಸಿನಿಮಾದ ಮಲಯಾಳಂ ಅವತರಣಿಕೆಯ ಹಾಡೊಂದನ್ನು ವಿನೀತ್ ಹಾಡಿದ್ದಾರೆ. ಈ ವಿಚಾರವನ್ನು ಖುದ್ದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.>   ಮಲಯಾಳಂನ ಖ್ಯಾತ ನಟ ಶ್ರೀನಿವಾಸನ್ ಪುತ್ರರಾಗಿರುವ ವಿನೀತ್ ನಟ ಜೊತೆಗೆ ಮಲಯಾಳಂನಲ್ಲಿ ಅನೇಕ ಹಿಟ್ ಹಾಡುಗಳನ್ನು ಕೊಟ್ಟವರು. ಈಗ ಚಾರ್ಲಿ ಸಿನಿಮಾದ ಹಾಡಿನ ರೆಕಾರ್ಡಿಂಗ್ ಮುಗಿಸಿದ್ದಾರೆ. ರಕ್ಷಿತ್ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾಗೆ ಕಿರಣ್ ರಾಜು ಆಕ್ಷನ್ ಕಟ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :