ತಾವು ತೆಗೆದುಕೊಂಡ ಆಯುರ್ವೇದದ ಕೊರೊನಾ ಔಷಧದ ಬಗ್ಗೆ ಮಾಹಿತಿ ನೀಡಿದ ನಟ ವಿಶಾಲ್

ಚೆನ್ನೈ| pavithra| Last Updated: ಗುರುವಾರ, 30 ಜುಲೈ 2020 (12:27 IST)

ಚೆನ್ನೈ : ಮನೆಯಲ್ಲಿದ್ದುಕೊಂಡೇ ಆಯುರ್ವೇದದ ಸೇವಿಸಿ ಕೊರೊನಾದಿಂದ ಮುಕ್ತರಾದ ನಟ ವಿಶಾಲ್ ಇದೀಗ ಅಭಿಮಾನಿಗಳ ಒತ್ತಾಯದ ಮೇರೆಗೆ ತಾವು ತೆಗೆದುಕೊಂಡ ಔಷಧಗಳ  ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟ ವಿಶಾಲ್ ಹಾಗೂ ಅವರ ತಂದೆ ಮತ್ತು ಮ್ಯಾನೇಜರ್ ಇತ್ತೀಚೆಗೆ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲಿಯೇ ಆಯುರ್ವೇದದ ಔಷಧ ಸೇವಿಸಿ ಕೊರೊನಾದಿಂದ 1 ವಾರದಲ್ಲಿಯೇ ಗುಣಮುಖರಾಗಿದ್ದರು. ಆದರೆ ಜನರು ಈ ಔಷಧದ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡ ಹಿನ್ನಲೆಯಲ್ಲಿ ಅದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

*ಸಿಎಫ್ ಎಸ್-ಕ್ಯೂಆರ್(CFS-QR) ಸಿರಪ್- ದಿನಕ್ಕೆ 3 ಬಾರಿ ಸೇವಿಸಬೇಕಂತೆ, ಆರ್ಸೆನೆಕ್ ಆಲ್ಬಯುಂ ಮಾತ್ರೆಗಳು- ಬೆಳಿಗ್ಗೆ 5, ಸಂಜೆ 5, ಪ್ಯಾಟ್ ಸಿರಫ್-ದಿನಕ್ಕೆ 3 ಬಾರಿ ತೆಗೆದುಕೊಳ್ಳಬೇಕಂತೆ. ಈ ಮೂರು ಔಷಧಿಗಳು ಎಲ್ಲಾ ಆಯುರ್ವೇದಿಕ್ ಹಾಗೂ ಹೋಮಿಯೋಪತಿ ಅಂಗಡಿಗಳಲ್ಲಿ ಲಭ್ಯವಿರುವುದಾಗಿ ನಟ ವಿಶಾಲ್ ತಿಳಿಸಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :