ಜ್ಯೂನಿಯರ್ ಚಿರುಗೆ ರಾಯನ್ ಹೆಸರು ಸೂಚಿಸಿದವರು ಯಾರು ಗೊತ್ತೇ?

ಬೆಂಗಳೂರು| Krishnaveni K| Last Modified ಶುಕ್ರವಾರ, 3 ಸೆಪ್ಟಂಬರ್ 2021 (16:35 IST)
ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರನಿಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ.
 > ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಂದರ್ ರಾಜ್ ಮತ್ತು ಸರ್ಜಾ ಕುಟುಂಬ ರಾಯನ್ ಬಗ್ಗೆ ಮಾತನಾಡಿದ್ದಾರೆ.>   ಈ ವೇಳೆ ತಮ್ಮ ಮಗನಿಗೆ ರಾಯನ್ ಹೆಸರು ಆಯ್ಕೆಯಾಗಿದ್ದು ಹೇಗೆ ಎಂಬುದನ್ನು ಮೇಘನಾ ಹೇಳಿಕೊಂಡಿದ್ದಾರೆ. ‘ರಾಯನ್ ಹೆಸರನ್ನು ನಾನೇ ಸೂಚಿಸಿದೆ. ಇದು ಎರಡೂ ಕುಟುಂಬದವರಿಗೂ ಒಪ್ಪಿಗೆಯಾಯಿತು’ ಎಂದಿದ್ದಾರೆ. ಅಂದ ಹಾಗೆ ರಾಯನ್ ಎಂದರೆ ‘ಯುವರಾಜ’ ಎಂದು ಅರ್ಥ ಎಂದು ಕುಟುಂಬದವರು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :