ಎಲ್ಲಿದ್ದೆ ಇಲ್ಲಿತನಕ: ಇದು ಸೃಜಾ ಕೆರಿಯರ್ನಲ್ಲೇ ಸ್ಪೆಷಲ್ ಸಿನಿಮಾ!

ಬೆಂಗಳೂರು, ಗುರುವಾರ, 10 ಅಕ್ಟೋಬರ್ 2019 (18:27 IST)

ಲೋಕೇಶ್ ಅವರು ನಟಿಸಿದ್ದ ಎಲ್ಲಿಂದಲೋ ಬಂದವರು ಚಿತ್ರದಲ್ಲಿ `ಎಲ್ಲಿಂದ ಬಂದ್ಯವ್ವ’ ಎಂಬ ಹಾಡು ಕನ್ನಡ ಚಿತ್ರಪ್ರೇಮಿಗಳ ಮನಸಲ್ಲಿ ಎಂದಿಗೂ ಹಸಿರಾಗಿರುತ್ತದೆ. ಒಂದೂ ಮರೆಯದ ಎವರ್ಗ್ರೀನ್ ಹಾಡುಗಳಲ್ಲಿ ಅದೂ ಕೂಡಾ ಸ್ಥಾನ ಪಡೆದುಕೊಂಡಿದೆ.
yellidde illitanaka

ಇದೀಗ ಲೋಕೇಶ್ ಪುತ್ರ ಸೃಜನ್ ಲೋಕೇಶ್ ಆ ಪ್ರಸಿದ್ಧ ಹಾಡಿನ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡಿರೋ `ಎಲ್ಲಿದ್ದೆ ಇಲ್ಲಿತನಕ’ ಇದೇ ತಿಂಗಳ 11ರಂದು ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ಇಂದು ಭಾರೀ ನಿರೀಕ್ಷೆ ಹುಟ್ಟಿಸಿರೋದಕ್ಕೆ ಹತ್ತಾರು ಕಾರಣಗಳಿವೆ.
yellidde illitanaka
ಮಜಾ ಟಾಕೀಸ್ ಶೋ ಮೂಲಕವೇ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವವರು ಸೃಜನ್ ಲೋಕೇಶ್. ಕನ್ನಡದ ಮಟ್ಟಿಗೆ ಕಿರುತೆರೆ ಪ್ರೇಕ್ಷಕರಿಗೆ ಹೊಸಾ ಅನುಭವ ನೀಡಿದ, ವರ್ಷಾಂತರಗಳ ಕಾಲ ಮಸ್ತ್ ಮಜಾ ಕೊಟ್ಟ ಈ ಶೋನ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದವರು ತೇಜಸ್ವಿ. ಅವರೇ ಎಲ್ಲಿದ್ದೆ ಇಲ್ಲಿತನಕ ಚಿತ್ರದ ನಿರ್ದೇಶನವನ್ನೂ ಮಾಡಿದ್ದಾರೆ. ಹಲವಾರು ವರ್ಷಗಳ ಕಾಲ ಸೃಜನ್ ಒಡನಾಡಿಯಾಗಿದ್ದುಕೊಂಡು ಯಶಸ್ವೀ ಶೋಗಳನ್ನು ನಿರ್ದೇಶನ ಮಾಡಿರುವ ತೇಜಸ್ವೀ ಈ ಸಿನಿಮಾವನ್ನು ಸೃಜನ್ ಕೆರಿಯರ್ನಲ್ಲಿಯೇ ಸ್ಪೆಷಲ್ ಮೂವಿಯಾಗಿ ದಾಖಲಾಗುವಂತೆ ನಿದೇಶನ ಮಾಡಿದ್ದಾರಂತೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಮೂಲಕ ಅದರ ಸ್ಪಷ್ಟ ಸುಳಿವು ಜಾಹೀರಾಗಿದೆ. ಇದರೊಂದಿಗೇ ಎಲ್ಲಿದ್ದೆ ಇಲ್ಲಿತನಕ ಭರವಸೆಯ ಚಿತ್ರವಾಗಿಯೂ ಹೊರಹೊಮ್ಮಿದೆ.
yellidde illitanaka
ಇನ್ನುಳಿದಂತೆ ಮಜಾ ಟಾಕೀಸ್ನ ಯಶಸ್ವೀ ತಂಡವೇ ಈ ಸಿನಿಮಾ ರೂಪಿಸೋದರಲ್ಲಿಯೂ ಪ್ರಧಾನ ಪಾತ್ರ ವಹಿಸಿದೆ. ಈ ಮೂಲಕ ಮತ್ತೊಂದು ಪ್ರತಿಭಾವಂತರ ತಂಡ ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡಿದಂತಾಗಿದೆ.
yellidde illitanaka

ಸೃಜನ್ ಲೋಕೇಶ್ ಅಟವರಿಗೆ ಸೂಟ್ ಆಗುವ, ಮನೋರಂಜನೆಯೇ ಪ್ರಧಾನವಾದರೂ ಎಲ್ಲ ಅಂಶಗಳನ್ನು ಒಳಗೊಂಡಿರುವ ಕಥೆಯೊಂದಿಗೆ ಈ ಸಿನಿಮಾ ಮೂಡಿ ಬಂದಿದೆ. ಲೋಕೇಶ್ ಪ್ರೊಡಕ್ಷನ್ಸ್ ಮೂಲಕವೇ ಅದ್ದೂರಿಯಾಗಿ ನಿರ್ಮಾಣಗೊಂಡಿರೋ ಈ ಚಿತ್ರ ಇದೇ ತಿಂಗಳ 11ರಂದು ಬಿಡುಗಡೆಯಾಗಲಿದೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಡಿ ಬಾಸ್ ದರ್ಶನ್ ಎರಡು ಚಿತ್ರಗಳಿಗೆ ಜತೆಯಾಗಿ ಕೆಲಸ ಮಾಡಲಿರುವ ಅರ್ಜುನ್ ಜನ್ಯಾ, ವಿ ಹರಿಕೃಷ್ಣ

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಟ್ಯಾಲೆಂಟೆಡ್ ಸಂಗೀತ ನಿರ್ದೇಶಕರಾದ ವಿ ಹರಿಕೃಷ್ಣ ಮತ್ತು ಅರ್ಜುನ್ ...

news

ರೆಬಲ್ ಸ್ಟಾರ್ ಅಂಬಿ ಮಾಮನ ಮನೆಯಲ್ಲಿ ರಾಕಿಂಗ್ ಬೇಬಿ ಐರಾ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಯಶ್ ರೆಬಲ್ ಸ್ಟಾರ್ ...

news

ಬಿಗ್ ಬಾಸ್ ಗಾಗಿ ಕಿಚ್ಚ ಸುದೀಪ್ ಪಡೆಯಲಿರುವ ಸಂಭಾವನೆಯೆಷ್ಟು ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಕನ್ನಡ 7 ನೇ ಆವೃತ್ತಿಗೆ ಇನ್ನೇನು ಎರಡೇ ದಿನ ಬಾಕಿಯಿದ್ದು ಈ ಶೋನಲ್ಲಿ ಪ್ರಮುಖ ...

news

ದಬಾಂಗ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಶರ್ಟ್ ಲೆಸ್ ಫೈಟ್ ಗೆ ಪ್ರೇರಣೆಯಾಗಿದ್ದು ಏನು ಗೊತ್ತಾ?

ಬೆಂಗಳೂರು: ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸಿನಿಮಾದಲ್ಲಿ ವಿಲನ್ ಆಗಿ ನಟಿಸಿರುವ ಕಿಚ್ಚ ಸುದೀಪ್ ಶರ್ಟ್ ...