ಬೆಂಗಳೂರು: ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ರಾಜ ಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ. ಚಿರು ಕೊನೆಯ ಸಿನಿಮಾವಾಗಿರುವುದರಿಂದ ಚಿತ್ರತಂಡ ಈ ಸಿನಿಮಾವನ್ನು ಅದ್ಧೂರಿಯಾಗಿಯೇ ತೆರೆಗೆ ತರಲು ಸಿದ್ಧತೆ ನಡೆಸಿದೆ. ರಾಜ ಮಾರ್ತಾಂಡ ಸಿನಿಮಾದ ಹಾಡಿನ ಲಿರಿಕಲ್ ವಿಡಿಯೋವೊಂದನ್ನು ಚಿತ್ರತಂಡ ಅಕ್ಟೋಬರ್ 17 ರಂದು ಬಿಡುಗಡೆಯಾಗಲಿದೆ. ಇದು ಹೀರೋ ಇಂಟ್ರಡಕ್ಷನ್ ಸಾಂಗ್ ಆಗಿರಲಿದೆ ಎಂದು ಚಿತ್ರತಂಡ ಹೇಳಿದೆ. ಅರ್ಜುನ್ ಜನ್ಯಾ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿರು ಸರ್ಜಾ ಅಭಿನಯದ ಶಿವಾರ್ಜುನ