ಮಂತ್ರಶಕ್ತಿ ನೆಪದಲ್ಲಿ 20 ತಿಂಗಳಲ್ಲಿ 10 ಮರ್ಡರ್ ಮಾಡಿದ ಕಿರಾತಕ

ಅಮರಾವತಿ| Jagadeesh| Last Modified ಬುಧವಾರ, 6 ನವೆಂಬರ್ 2019 (18:31 IST)
ತನ್ನಲ್ಲಿ ಅದ್ಭುತ ಶಕ್ತಿ ಇದೆ ಅಂತ ಜನರನ್ನು ನಂಬಿಸಿ ಆ ಕಿರಾತಕ 20 ತಿಂಗಳಲ್ಲಿ 10 ಕೊಲೆಗಳನ್ನು ಮಾಡಿರೋದು ಬೆಳಕಿಗೆ ಬಂದಿದೆ.
ಮಂತ್ರಶಕ್ತಿ ನೆಪದಲ್ಲಿ ಜನರಿಗೆ ಸೈನೆಡ್ ನೀಡಿ ಕೊಲೆ ಮಾಡಿ ನಗದು, ಚಿನ್ನಾಭರಣ ದೋಚುತ್ತಿದ್ದ ಕಿರಾತಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.> > ಆಂಧ್ರದ ಗೋದಾವರಿಯಲ್ಲಿ ಘಟನೆ ನಡೆದಿದ್ದು, ರಿಯಲ್ ಎಸ್ಟೇಟ್ ನಲ್ಲಿ ಕೈಸುಟ್ಟುಕೊಂಡು ಕೊನೆಗೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವೆಲ್ಲಂಕಿ ಸಿಂಹಾದ್ರಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆ ಹರಿಸೋದಾಗಿ ಜನರಿಗೆ ನಂಬಿಸಿ ಅವರಿಗೆ ಸೈನೆಡ್ ನೀಡಿ ನಗದು, ಚಿನ್ನಾಭರಣವನ್ನು ಈ ಖದೀಮ ದೋಚುತ್ತಿದ್ದನು.

ಇದರಲ್ಲಿ ಇನ್ನಷ್ಟು ಓದಿ :