ದೇಶದಲ್ಲಿ ಕೊರೊನಾಕ್ಕೆ ಒಂದೇ ದಿನ 17 ಬಲಿ : 549 ಪಾಸಿಟಿವ್

ನವದೆಹಲಿ| Jagadeesh| Last Modified ಗುರುವಾರ, 9 ಏಪ್ರಿಲ್ 2020 (19:52 IST)
ದೇಶದಲ್ಲಿ ಒಂದೇ ದಿನದಲ್ಲಿ 17 ಜನರು ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದು, 549 ಜನರಲ್ಲಿ ಸೋಂಕು ಇರೋದು ಪತ್ತೆಯಾಗಿದೆ.
ಮಹಾಮಾರಿ ಕೊರೊನಾದಿಂದ ದೇಶದಲ್ಲಿ ಸಾವಿನ ಸಂಖ್ಯೆ 166ಕ್ಕೆ ಏರಿಕೆಯಾದಂತಾಗಿದೆ. 5734 ಜನರಲ್ಲಿ ಸೋಂಕು ಇದ್ದು, 473 ಜನರು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಹೀಗಂತ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗ್ರವಾಲ್ ಹೇಳಿದ್ದಾರೆ. > > ಕೊರೊನಾ ವೈರಸ್ ತಡೆಯಲು ಬಳಕೆಯಾಗುವ ಚಿಕಿತ್ಸೆಗೆ ಅಗತ್ಯವಿರುವ ಪಿಪಿಇ, ಮಾಸ್ಕ್, ವೆಂಟಿಲೇಟರ್ ಗಳಿಗೆ ಸಮಸ್ಯೆಯಾಗುವುದಿಲ್ಲ ಎಂದಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :