Widgets Magazine

ಗೃಹ ಪ್ರವೇಶದ ಊಟ ಸೇವಿಸಿ 40 ಮಂದಿ ಅಸ್ವಸ್ಥ

ಹಾಸನ| pavithra| Last Modified ಸೋಮವಾರ, 11 ನವೆಂಬರ್ 2019 (11:14 IST)
: ಗೃಹ ಪ್ರವೇಶದ ಊಟ ಸೇವಿಸಿ 40 ಮಂದಿ ಅಸ್ವಸ್ಥಗೊಂಡಿರುವ ಘಟನೆ ಭಾನುವಾರದಂದು ಹಾಸನ ಜಿಲ್ಲೆಯ ಗುಡ್ಡೇನಹಳ್ಳಿಯಲ್ಲಿ ನಡೆದಿದೆ.
ನಿನ್ನೆ ದೇವರಾಜ್ ಎಂಬುವವರ ಮನೆಯ ಗೃಹ ಪ್ರವೇಶ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ 40 ಮಂದಿಗೆ ಊಟ ಮಾಡಿದ ಬಳಿಕ ವಾಂತಿ ,ಭೇದಿ ಶುರುವಾಗಿ ಅಸ್ವಸ್ಥರಾಗಿದ್ದಾರೆ.


ತಕ್ಷಣ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಲುಷಿತ ಆಹಾರ ಸೇವಿಸಿ ಅವರಿಗೆ ಹೀಗಾಯ್ತಾ? ಅಥವಾ ಆಹಾರದಲ್ಲಿ ಯಾರಾದರೂ ಏನಾದರೂ ಕಲಬೆರಕೆ ಮಾಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

ಇದರಲ್ಲಿ ಇನ್ನಷ್ಟು ಓದಿ :