Widgets Magazine

ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನು 16 ಬಾರಿ ಇರಿದು ಕೊಂದ

ಬೆಂಗಳೂರು| pavithra| Last Modified ಭಾನುವಾರ, 3 ಫೆಬ್ರವರಿ 2019 (07:21 IST)
ಬೆಂಗಳೂರು : ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿ ಜೊತೆ ಹೊಂದಿದ್ದ ಸ್ನೇಹಿತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ನೀಲಸಂದ್ರ ಬಳಿಯ ರೋಸ್ ಗಾರ್ಡನ್ 6ನೇ ಕ್ರಾಸ್ ನಲ್ಲಿ ನಡೆದಿದೆ.


ಅರುಳ್ ರಾಜ್ (36) ಕೊಲೆಯಾದ ದುರ್ದೈವಿ, ಅರುಣ್ ಎಂಬಾತನೇ ಚಾಕುವಿನಿಂದ ಇರಿದ ಆರೋಪಿ. ಇವರಿಬ್ಬರು ಸ್ನೇಹಿತರಾಗಿದ್ದರು. ಆದರೆ ಅರುಣ್ ಪತ್ನಿ, ಅರುಳ್ ರಾಜ್ ಜೊತೆ ಅಕ್ರಮ ಸಂಬಂಧದ ಹೊಂದಿದ್ದಳು. ಈ ವಿಚಾರ ರಾತ್ರಿ ಇಬ್ಬರು ಒಟ್ಟಿಗೆ ಬಾರ್ ಗೆ ಹೋಗಿ ಕುಡಿದು ಗಲಾಟೆ ಮಾಡಿಕೊಂಡ ವೇಳೆ ಬಹಿರಂಗಗೊಂಡಿದೆ.


ವಿಷಯ ತಿಳಿದು ಕೋಪಗೊಂಡ ಅರುಣ್ ಬಾರ್ ನಿಂದ ಹೊರಗೆ ಬಂದ ವೇಳೆ ಅರುಳ್ ರಾಜ್ ಗೆ 16 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಅರುಣ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :