ಪತ್ನಿಗೆ ಮಾಡಿದ್ದನ್ನು ಅತ್ತೆಗೂ ಮಾಡಿದ ಪಾಪಿ ಅಳಿಯ

ಅಹಮದಾಬಾದ್| Jagadeesh| Last Modified ಸೋಮವಾರ, 18 ನವೆಂಬರ್ 2019 (19:09 IST)

ಪತ್ನಿಗೆ ಮನೆಯಲ್ಲೇ ಮಾಡುತ್ತಿದ್ದ ಕೆಲಸವನ್ನು ಅಳಿಯನೊಬ್ಬ ತನ್ನ ಅತ್ತೆಗೆ ಅಮಾನವೀಯವಾಗಿ ನಡುರಸ್ತೆಯಲ್ಲೇ ಮಾಡಿದ್ದಾನೆ.

ಪದೇ ಪದೇ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದರಿಂದ ಪತಿಯ ಕಾಟಕ್ಕೆ ಬೇಸತ್ತ ಹೆಂಡತಿ ತವರು ಮನೆ ಸೇರಿದ್ದಳು.

ಅಳಿಯನ ಉಪಟಳದಿಂದ ಅತ್ತೆಯೂ ಬೇಸತ್ತಿದ್ದಳು. ಹೀಗಾಗಿ ತನ್ನ ಮಗಳೊಂದಿಗೆ ಸೇರಿಕೊಂಡು ಕಿರಾತಕ ಅಳಿಯನ ವಿರುದ್ಧ ದೂರು ನೀಡಿದ್ದಳು.

ದೂರು ನೀಡಿದ್ದಕ್ಕೆ ಕೆಂಡಾಮಂಡಲವಾಗಿದ್ದ ಆರೋಪಿ ಶೈಲೇಶ್ ಠಾಕೂರ್ (34) ತನ್ನ ಪತ್ನಿ ಹೇತಲ್ (28) ಹಾಗೂ ಅತ್ತೆ ಶಾಂತಾ (48) ಅವರಿಗೆ ನಡು ರಸ್ತೆಯಲ್ಲೇ ಹಲ್ಲೆ ನಡೆಸಿ, ಚಾಕುವಿನಿಂದ ತಿವಿದು ಪರಾರಿಯಾಗಿದ್ದಾನೆ.

ಅಳಿಯನ ಚಾಕು ತಿವಿತಕ್ಕೆ ಅತ್ತೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಗುಜರಾತ್ ನಲ್ಲಿ ಘಟನೆ ನಡೆದಿದೆ.

 

 





ಇದರಲ್ಲಿ ಇನ್ನಷ್ಟು ಓದಿ :