ವಿಧವೆ ಮೇಲಿನ ಮೋಹಕ್ಕೆ ಲಕ್ಷ ಲಕ್ಷ ಹಣ ಕಳೆದುಕೊಂಡ ಮುದುಕ

ಮುಂಬೈ| Jagadeesh| Last Modified ಶನಿವಾರ, 18 ಜುಲೈ 2020 (20:28 IST)
ಪತ್ನಿ ಸಾವನ್ನಪ್ಪಿದ ಬಳಿಕ ವಿಧವೆಯೊಬ್ಬಳನ್ನು ಮದುವೆಯಾಗಲು ಹೊರಟಿದ್ದ ಮುದುಕನೊಬ್ಬ ಯಾಮಾರಿ ಲಕ್ಷಾಂತರ ಹಣ ಕಳೆದುಕೊಂಡ ಘಟನೆ ನಡೆದಿದೆ.

ಜೈಪುರ ಮೂಲದ 40 ವರ್ಷದ ವಿಧವೆಯನ್ನು 69 ವರ್ಷದ ವೃದ್ಧನೊಬ್ಬ ಮದುವೆಯಾಗೋಕೆ ಅಂತ ಮುಂದಾಗಿದ್ದನು.

ಆದರೆ ಅದೂ ಇದೂ ಅಂತ ಹೇಳಿ ಮದುವೆ ನಾಟಕವಾಡಿದ ವಿಧವೆ ಮನೆಯವರು ವೃದ್ಧನಿಗೆ ನಂಬಿಸಿ ಮಾಡಿದ್ದಾರೆ.

ಆತನ ಮನೆಯಲ್ಲೇ ಕೆಲವು ದಿನ ತಂಗಿದ್ದು, ಆ ಬಳಿಕ 25 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಮುಂಬೈನ ಬೊರಿವಾಲಿ ನಿವಾಸಿಯಾಗಿರುವ ವೃದ್ಧ ಮೋಸ ಹೋಗಿದ್ದು, ಇದೀಗ ವಿಧವೆ ಹಾಗೂ ಆಕೆಯ ಮನೆ ಮಂದಿ ವಿರುದ್ಧ ಕೇಸ್ ದಾಖಲು ಮಾಡಿದ್ದಾನೆ.


ಇದರಲ್ಲಿ ಇನ್ನಷ್ಟು ಓದಿ :