ಅಡುಗೆ ಭಟ್ಟರಿಂದಾಗಿ ಸಿಕ್ಕಿಹಾಕಿಕೊಂಡ ಡ್ರಗ್ ಆರೋಪಿ ಆದಿತ್ಯಾ ಆಳ್ವಾ

ಬೆಂಗಳೂರು| Krishnaveni K| Last Modified ಬುಧವಾರ, 13 ಜನವರಿ 2021 (09:36 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕೊನೆಗೂ ಆದಿತ್ಯಾ ಆಳ್ವಾರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಷ್ಟು ದಿನ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ ಆದಿತ್ಯ ಈಗ ಬಂಧನವಾಗಲು ಅವರ ಅಡುಗೆ ಭಟ್ಟರೇ ಕಾರಣವಾಗಿದ್ದು ವಿಶೇಷ.

 
ಸಿಸಿಬಿ ಪೊಲೀಸರು ಆದಿತ್ಯಾ ಆಳ್ವಾರ ಆಪ್ತರ ಮೇಲೆ ಕೆಲವು ದಿನಗಳಿಂದ ನಿಗಾ ಇಟ್ಟಿದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿನ ಆಪ್ತ ಸ್ನೇಹಿತ ಮತ್ತು ಅಡುಗೆ ಭಟ್ಟನಿಗೆ ಚೆನ್ನೈಗೆ ಬರಲು ಹೊಸ ನಂಬರ್ ನಿಂದ ಕರೆ ಮಾಡಿ ತಿಳಿಸಿದ್ದ. ಅದರಂತೆ ಇಬ್ಬರೂ ದಿಡೀರ್ ಆಗಿ ಚೆನ್ನೈಗೆ ಹೊರಟಾಗ ಅಚ್ಚರಿಗೊಂಡ ಪೊಲೀಸರು ಅವರ ಬೆನ್ನು ಬಿದ್ದಿದ್ದರು. ಇಬ್ಬರ ಮೊಬೈಲ್ ಟವರ್ ಪರಿಶೋಧಿಸಿದಾಗ ಚೆನ್ನೈನ ಓಲ್ಡ್ ಮಹಾಬಲಿಪುರಂನ ಕಣತ್ತೂರು ಬಳಿಯ ರೆಸಾರ್ಟ್ ಒಂದರಲ್ಲಿ ಪತ್ತೆಯಾಗಿತ್ತು. ಅಲ್ಲಿಗೆ ಗ್ರಾಹಕರ ಸೋಗಿನಲ್ಲಿ ಹೋದ ಪೊಲೀಸರು ಆದಿತ್ಯ ಆಳ್ವ ಮತ್ತು ಇತರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :