ಸಿಟ್ಟಾದ ಕಾಡಾನೆ ತುಳಿದು ಕೊಂದದ್ದು ಯಾರನ್ನು ಗೊತ್ತಾ?

ಬೆಂಗಳೂರು, ಬುಧವಾರ, 14 ಆಗಸ್ಟ್ 2019 (19:55 IST)

ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿರೋ ಭೀಕರ ಘಟನೆ ನಡೆದಿದೆ.

ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಅಟ್ಟುವ ಸಂದರ್ಭದಲ್ಲಿ ವ್ಯಕ್ತಿಯ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿರುವಂತಹ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ಹೊಸಕೋಟೆಯ ತಿರುವರಂಗ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ- ತಮಿಳುನಾಡಿನ ಗಡಿ ಭಾಗದ ಸುತ್ತಮುತ್ತಲಿನ ಗ್ರಾಮಗಳ ಕಡೆ  ಓಡಾಡಿಕೊಂಡಿದ್ದ ಆನೆಗಳು ಕರ್ನಾಟಕಕ್ಕೆ ಎಂಟ್ರಿ ಕೊಟ್ಟು ಸರ್ಜಾಪುರ, ಮುಗಳೂರು ಮಾರ್ಗವಾಗಿ ಕಾಡಿಗೆ ಅಟ್ಟುವ ಸಂದರ್ಭದಲ್ಲಿ ತಿರುವರಂಗ ಗ್ರಾಮದ ಬಳಿ  ಆನೆಗಳನ್ನು ನೋಡಲು ಬಂದ ಅಣ್ಣಯ್ಯಪ್ಪ(40) ಎಂಬಾತನ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ.

ಇನ್ನು ಈ ಎರಡು ಆನೆಗಳು ತಮಿಳುನಾಡಿನ ಅರಣ್ಯದ ಆನೆಗಳಾಗಿವೆ. ಈಗಾಗಲೇ ತಮಿಳುನಾಡಿನ ಏಳು ಜನರನ್ನು ಬಲಿ ತೆಗೆದುಕೊಂಡಿದ್ದು, ಈ ಆನೆಗಳನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಓಡಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ.  

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಲಪ್ರಳಯದ ಮಧ್ಯೆ ಸರಳವಾಗಿ 73ನೇ ಸ್ವಾತಂತ್ರ್ಯ ದಿನಾಚರಣೆ

ಬೆಂಗಳೂರು: 73ನೇ ಸ್ವಾತಂತ್ರ್ಯ ದಿನಾಚರಣೆ ಸಂಬಂಧ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಭದ್ರತೆ ...

news

ಪಾಕ್ ನಲ್ಲಿ ಹಾಡು ಹಾಡಿದ ಭಾರತೀಯ ಗಾಯಕನಿಗೆ ಎಂಥಾ ಶಿಕ್ಷೆ

ಭಾರತ – ಪಾಕಿಸ್ತಾನ ನಡುವೆ ಈಗಾಗಲೇ ಕಾಶ್ಮೀರ ವಿಷಯ ವಿವಾದವೆಬ್ಬಿಸಿದೆ. ಈ ನಡುವೆ ಪಾಕ್ ಗೆ ಹೋಗಿ ಹಾಡು ...

news

6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್: ಮುಳುಗುತ್ತಿದೆ ಕರ್ನಾಟಕ

ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳು ಜಲಾವೃತಗೊಳ್ಳುತ್ತಿವೆ.

news

ಪ್ರಿಯಾಂಕಾ ಚೋಪ್ರಾ ಬೆಡ್ ರೂಮಿನಲ್ಲಿ ಏನೆಲ್ಲಾ ಆಗ್ತಿದೆ?

ಸದಾ ತನ್ನ ಮಾದಕತೆಯಿಂದ ಹಾಗೂ ವಿಭಿನ್ನತೆಯಿಂದಾಗಿ ಸುದ್ದಿಯಲ್ಲಿರೋ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ತಮ್ಮ ...