ಕೆಲಸಕೊಡಿಸುವುದಾಗಿ ಜನರನ್ನು ವಂಚಿಸುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು| pavithra| Last Modified ಗುರುವಾರ, 2 ಜುಲೈ 2020 (10:13 IST)
ಬೆಂಗಳೂರು : ಜನರಿಗೆ ಕೆಲಸದ ಆಮಿಷವೊಡ್ಡಿ ಕೋಟಿ ರೂಪಾಯಿ ವಂಚನೆ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಶಿವಕುಮಾರ್ ಹೊಸಹಳ್ಳಿ ಬಂಧಿತ ಆರೋಪಿ. ಕೊರೊನಾದ ಈ ವೇಳೆ ಕೆಲಸವಿಲ್ಲದೆ ಪರದಾಡುತ್ತಿದ್ದ ಜನರಿಗೆ ರಾಜಕಾರಿಗಳು ಹಾಗೂ ಅವರ ಕುಟುಂಬಸ್ಥರು ಪರಿಚಯವಿರುವುದಾಗಿ ಸುಳ್ಳು ಹೇಳಿ ಕೊಡಿಸುವುದಾಗಿ ನಂಬಿಸಿ  ಅವರಿಂದ ವಸೂಲಿ ಮಾಡಿ ಬಳಿಕ ಅವರಿಗೆ ಮೋಸ ಮಾಡುತ್ತಿದ್ದ.

ಈತ ಈ ರೀತಿಯಾಗಿ ಹೇಳಿ 10ಕ್ಕೂ ಹೆಚ್ಚು ಜನರಿಂದ 1 ಕೋಟಿಗೂ ಅಧಿಕ ಹಣ ವಂಚಿಸಿದ್ದ ಎನ್ನಲಾಗಿದೆ. ಇದೀಗ ಸಿಸಿಬಿ  ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :