ಪೊಲೀಸ್ ಬಲೆಗೆ ಬಿದ್ದ ಶಿಶು ಕಳ್ಳರು!

ಮುಂಬೈ| pavithra| Last Modified ಶುಕ್ರವಾರ, 22 ಜನವರಿ 2021 (15:34 IST)
ಮುಂಬೈ : ಶಿಶುಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದ ಗುಂಪೊಂದನ್ನು ಮುಂಬೈ ಅಪರಾಧ ವಿಭಾಗವು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದೆ.

ಈ ದಂಧೆಯಲ್ಲಿ  6 ಮಹಿಳೆಯರು ಸೇರಿದಂತೆ 8 ಜನರು ಭಾಗಿಯಾಗಿದ್ದರು. ಆರೋಪಿಗಳು ಹೆಣ್ಣು ಮಕ್ಕಳನ್ನು 60,000 ರೂ.ಗೆ ಮತ್ತು ಹುಡುಗರನ್ನು 1.50ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. 6 ತಿಂಗಳಲ್ಲಿ ಆರೋಪಿಗಳು 4 ಶಿಶುಗಳನ್ನು ಮಾರಾಟ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.ಇದರಲ್ಲಿ ಇನ್ನಷ್ಟು ಓದಿ :