Widgets Magazine

ನಿರಾಣಿ ಬೀದಿ ನಾಯಿ ಎಂದ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ| Jagadeesh| Last Modified ಗುರುವಾರ, 16 ಜನವರಿ 2020 (17:56 IST)
ರೋಡ್ ಚಾಪ್, ಬೀದಿ ನಾಯಿ ಮಾತಿಗೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ. ಹೀಗಂತ ನಿರಾಣಿಗೆ ಬಾಯಿಗೆ ಬಂದಂಗೆ ಬೈದಿದ್ದಾರೆ ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿದ್ದಾರೆ. ನಾಲಿಗೆಯನ್ನು ಹೆಚ್ಚು ಉದ್ದ ಬಿಟ್ಟರೆ ಪರಿಣಾಮ ಚೆನ್ನಾಗಿರೋದಿಲ್ಲ.

ನನ್ನ ತಂಟೆಗೆ ಬಂದರೆ ಅವರ ಜನ್ಮ ಜಾತಕವನ್ನು ಬಿಡುಗಡೆ ಮಾಡುವೆ ಅಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇನ್ನೊಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ರಾಜೀನಾಮೆ ಕೊಟ್ಟಿದ್ದ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು. ಕೊಟ್ಟ ಮಾತನ್ನು ಸಿಎಂ ಉಳಿಸಿಕೊಳ್ಳಬೇಕೆಂದರು.


ಇದರಲ್ಲಿ ಇನ್ನಷ್ಟು ಓದಿ :