ಬಿಬಿಎಂಪಿಯಿಂದ ಮನೆ ಮಾಲೀಕರಿಗೆ ನೋಟಿಸ್

ಬೆಂಗಳೂರು| geetha| Last Updated: ಮಂಗಳವಾರ, 23 ನವೆಂಬರ್ 2021 (15:57 IST)
ಬೆಂಗಳೂರು ನಗರದ ಹೊರಭಾಗಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿರುವ ಪ್ರಕರಣಗಳಲ್ಲಿ ಬಿಬಿಎಂಪಿ ಇತ್ತೀಚೆಗೆ ಕಟ್ಟಡ ಮಾಲಿಕರಿಗೆ ನೊಟೀಸ್ ಜಾರಿ ಮಾಡಲು ಪ್ರಾರಂಭಿಸಿದೆ.
 
ನಿರ್ಮಾಣ ನಿಯಮಗಳ ಉಲ್ಲಂಘನೆ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿ.09 ರ ವೇಳೆಗೆ ವರದಿ ಸಲ್ಲಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾರ್ಯಪ್ರವೃತ್ತವಾಗಿದೆ.ಬಿಬಿಎಂಪಿಯಲ್ಲಿನ ಈ ಬೆಳವಣಿಗೆಯಿಂದ ಸಾರ್ವಜನಿಕರು ಮನೆ-ಮನೆಗಳಿಗೆ ಯೋಜನೆಯ ಅನುಮೋದನೆ (plan approval) ದಾಖಲೆಗಳನ್ನು ನೀಡುವಂತೆ ನೊಟೀಸ್ ಬರಲಿದೆ ಎಂಬ ಭೀತಿಯನ್ನು ಎದುರಿಸುತ್ತಿದ್ದಾರೆ.
 
ಬಿ'ಖಾತೆಗಳ ನಿವೇಶನಗಳ (ಇನ್ನಷ್ಟೇ ವಸತಿಯೋಗ್ಯ ಭೂಮಿಯಾಗಿ ಮಾರ್ಪಾಡಾಗಬೇಕಿರುವ ಕಂದಾಯ ಭೂಮಿ ಅಥವಾ ಕೃಷಿ ಭೂಮಿಗಳು) ಲ್ಲಿನ ಕಟ್ಟಡಗಳನ್ನು ಬಿಬಿಎಂಪಿ ಅಕ್ರಮ ಕಟ್ಟಡ ಎಂದು ಪರಿಗಣಿಸುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :