Widgets Magazine

ಬಿಜೆಪಿಯ ಯಾವ ನಾಯಕರಿಗೂ ಒಳ್ಳೆಯ ಸಂಸ್ಕೃತಿ ಇಲ್ಲ-ಸಿದ್ದರಾಮಯ್ಯ ಕಿಡಿ

ಬೆಂಗಳೂರು| pavithra| Last Modified ಬುಧವಾರ, 20 ನವೆಂಬರ್ 2019 (10:36 IST)
ಬೆಂಗಳೂರು : ಕುರುಬಸಮುದಾಯದ ವಿರುದ್ಧ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಬಿಜೆಪಿ ನಾಯಕರ ವಿರುದ್ಧ ವಿಪಕ್ಷ ನಾಯಕ ಕಿಡಿಕಾರಿದ್ದಾರೆ.
ಹುಳಿಯಾರು ಸರ್ಕಲ್ ಗೆ ಕನಕದಾಸರ ಹೆಸರಿಡುವ ವಿಚಾರಕ್ಕೆ ಕುರುಬ ಸಮುದಾಯಕ್ಕೆ ಹಾಗೂ ಸ್ವಾಮೀಜಿಯ ಜೊತೆ ಸಚಿವ ಮಾಧುಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಎಲ್ಲರಿಗೂ ಒಂದು ಸಂಸ್ಕೃತಿ ಇರಬೇಕು. ಬಿಜೆಪಿಯ ಯಾವ ನಾಯಕರಿಗೂ ಒಳ್ಳೆಯ ಸಂಸ್ಕೃತಿ ಇಲ್ಲ. ಅವರದು ಫ್ಯಾಸಿಸ್ಟ್ ಪಕ್ಷ, ಅವರು ನೈಜ ಮಾತುಗಳನ್ನು ಆಡಲ್ಲ. ಸುಳ್ಳನ್ನೇ ಪ್ರಸಾರ ಮಾಡೋದು ಅವರ ಕೆಲಸ. ಸತ್ಯವನ್ನು ಸುಳ್ಳು ಮಾಡೋದು, ಸುಳ್ಳನ್ನು ಸತ್ಯ ಮಾಡುವವರು. ಬಿಜೆಪಿ ನಾಯಕರದ್ದು ಹಿಟ್ಲರ್ ನ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :