ಬಿಜೆಪಿ ಅಧ್ಯಕ್ಷ ಹುದ್ದೆ ಬಸ್, ರೈಲಲ್ಲ; ಯತ್ನಾಳ್ ಗೆ ತಿವಿದ ಪಟ್ಟಣಶೆಟ್ಟಿ

ವಿಜಯಪುರ, ಸೋಮವಾರ, 13 ಮೇ 2019 (14:11 IST)

ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ನಾನು ಟವೆಲ್ ಹಾಕಿದ್ದೀನಿ ಎಂದಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸ್ವಪಕ್ಷದ ಮಾಜಿ ಸಚಿವರೇ ತಿವಿದಿದ್ದಾರೆ.

ಶಾಸಕ ಯತ್ನಾಳ ಗೆ ಟಾಂಗ್ ನೀಡಿದ್ದಾರೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ. ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿಕೆ ನೀಡಿದ್ದು, ಬಿಜೆಪಿ ಅಧ್ಯಕ್ಷರ ಖುರ್ಚಿ ಮೇಲೆ ಟವೆಲ್ ಹಾಗೂ ಕರ್ಚೀಫ್ ಹಾಕೇನಿ ಅನ್ನೋದು ಹುಡುಗಾಟಿಕೆಯಲ್ಲ.

ಟವೆಲ್ ಹಾಕೋಕೆ ಅದು, ರೈಲ್ವೆ ಹಾಗೂ ಬಸ್ ಅಲ್ಲ ಎಂದ ಕುಟುಕಿದ್ದಾರೆ. ಟವೆಲ್ ಹಾಕೇನೆಂದು ಯತ್ನಾಳ ಹೇಳುವುದು ಸರಿಯಲ್ಲ. ರಾಷ್ಟ್ರೀಯ ಅಧ್ಯಕ್ಷರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ.

ಬಿಜೆಪಿ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೇನೆ ಎಂದ್ರು. ಜಾತಿ ಮೇಲೆ ಲಾಬಿ ಮಾಡುವುದು ಸರಿಯಲ್ಲ ಅಂತ ಪಟ್ಟಣಶೆಟ್ಟಿ ಹೇಳಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕುಪೇಂದ್ರ ರೆಡ್ಡಿ ಹೇಳಿಕೆಗೆ ಪರಮೇಶ್ವರ್ ಟಾಂಗ್

ರಾಜ್ಯದ ಮೈತ್ರಿ ನಾಲ್ಕು ವರ್ಷ ಮುಂದುವರಿಯಬೇಕಿದೆ. ಹೀಗಾಗಿ ಇಂತಹ ಹೇಳಿಕೆ ಮುಂದುವರಿಯಬಾರದು ಅಂತ ಡಿಸಿಎಂ ...

news

ಬಿಜೆಪಿಯದ್ದು ಪೇಶೆಂಟ್ ಇಲ್ಲದ ಕಮಲ ನರ್ಸಿಂಗ್ ಹೋಂ

ಬಿಜೆಪಿಯವರು ಡೋಂಗಿ ರಾಜಕಾರಣ ಮಾಡ್ತಿದ್ದಾರೆ. ಹೊಸದಾಗಿ ಕಮಲ ನರ್ಸಿಂಗ್ ಬೇರೆ ಮಾಡಿದ್ದಾರೆ. ಆದರೂ ...

news

ಮೈತ್ರಿ ಸರಕಾರ ಪತನ?: ಕಾಂಗ್ರೆಸ್ ನವರು ಅವರ ದಾರಿ ನೋಡಿಕೊಳ್ಳಲಿ ಎಂದ ಜೆಡಿಎಸ್

ಕಾಂಗ್ರೆಸ್ ನವರಿಗೆ ಕಷ್ಟ ಆದ್ರೆ ಅವರ ದಾರಿ ಅವರು ನೋಡಿಕೊಳ್ಳಲಿ ಎಂದು ಜೆಡಿಎಸ್ ರಾಜ್ಯಸಭಾ ಸದಸ್ಯ ಹೊಸ ...

news

ರಾಜಕೀಯಕ್ಕಾಗಿ ಪತ್ನಿಯನ್ನು ಬಿಟ್ಟವರು ಮೋದಿ: ಮಾಯಾವತಿ ವೈಯಕ್ತಿಕ ಟೀಕೆ

ನವದೆಹಲಿ: ಪ್ರಧಾನಿ ಮೋದಿಯ ವೈಯಕ್ತಿಕ ಜೀವನವನ್ನು ಆಗಾಗ ವಿರೋಧಿಗಳು ಕೆದಕಿ ಟೀಕೆ ಮಾಡುತ್ತಲೇ ಇರುತ್ತಾರೆ. ...