ನವದೆಹಲಿ-ಮೋದಿ ಎಂಬ ಚಾಣಕ್ಯನನ್ನು ಸೋಲಿಸಿದರೇ ಮಾತ್ರ, ಬಿಜೆಪಿಯನ್ನು ಸೋಲಿಸಲು ಸಾಧ್ಯ.. ಈ ಸತ್ಯ ಸ್ವತಃ ಇಂಡಿಯಾ ಒಕ್ಕೂಟದ ನಾಯಕರಿಗೂ ಗೊತ್ತಿದೆ.ಹಾಗೇಂದ ಮಾತ್ರಕ್ಕೆ ಎಲ್ಲವೂ ಮೋದಿಯ ಪರವಾಗಿಯೇ ಆಗಿ ಬಿಡುತ್ತೆ ಅನ್ನೋದು ಸುಳ್ಳು. ಯಾಕಂದ್ರೆ ಎಲೆಕ್ಷನ್ಗೆ ಏನಿಲ್ಲ ಅಂದರೂ ಇನ್ನೂ ಮೂರು ತಿಂಗಳು ಬಾಕಿ ಇದೆ. ಅಷ್ಟರಲ್ಲಿ ಏನೇನು ಬದಲಾವಣೆ ಬೇಕಾದರೂ ರಾಜಕಾರಣದಲ್ಲಿ ಆಗಿಬಿಡಬಹುದು. ಅರ್ಥಾತ್ ಎನ್ಡಿಎ ಒಕ್ಕೂಟದಲ್ಲಿ ಸದ್ಯಕ್ಕೆ ಮೋದಿ ಅಂಡ್ ಟೀಂಮ್ಗೆ ಪ್ರಚಂಡ ಗೆಲುವಿನ ವಿಶ್ವಾಸವಂತೂ ಖಂಡಿತಾ ಇದ್ದೇ ಇದೆ.