ಡಿ.5ರಂದು ಬಂದ್ ಮಾಡದಂತೆ ಕನ್ನಡ ಸಂಘಗಳಿಗೆ ಸಿಎಂ ಖಡಕ್ ಎಚ್ಚರಿಕೆ

ಬೆಂಗಳೂರು| pavithra| Last Modified ಬುಧವಾರ, 18 ನವೆಂಬರ್ 2020 (10:46 IST)
ಬೆಂಗಳೂರು : ಮರಾಠ ಜನಾಂಗದ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಂದ್ ಮಾಡದಂತೆ ಕನ್ನಡ ಸಂಘಗಳಿಗೆ ಸಿಎಂ ಬಿಎಸ್ ವೈ ಮನವಿ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕರ್ನಾಟಕ ಬಂದ್ ಮಾಡೋ ಅಗತ್ಯವಿಲ್ಲ. ಮರಾಠಿಗರು ನಮ್ಮ ರಾಜ್ಯದ ಕನ್ನಡಿಗರು. ರಾಜ್ಯದ ಮರಾಠಿಗರ ಅಭಿವೃದ್ಧಿಗೆ ನಿಗಮ ರಚನೆ ಮಾಡಲಾಗುವುದು. ಗೊಂದಲ ಉಂಟುಮಾಡುವ ಕೆಲಸ ಬೇಡ. ಡಿ.5ರಂದು ಬಂದ್ ಮಾಡುವ ಅಗತ್ಯವಿಲ್ಲ. ಬಲವಂತವಾಗಿ ಬಂದ್ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಸಂಘಗಳಿಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :