ಸಿಎಂ ಭತ್ತ ನಾಟಿ: ಮಾಜಿ ಸಿಎಂ ಶೆಟ್ಟರ್ ಟಾಂಗ್

ಚಿಕ್ಕೋಡಿ, ಭಾನುವಾರ, 12 ಆಗಸ್ಟ್ 2018 (14:51 IST)

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಭತ್ತ ನಾಟಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ ಟಾಂಗ್ ನೀಡಿದ್ದಾರೆ.
 
ಮಂಡ್ಯ ಜಿಲ್ಲೆಯ ಸೀತಾಪೂರದಲ್ಲಿ ಸಿಎಂ ಕುಮಾರಸ್ವಾಮಿ  ಬರೀ ಶೋ ಅಪ್  ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ ಶೆಟ್ಟರ್, ಯಾವಾಗಲೋ ಒಮ್ಮೆ ನಾಟಿ ಮಾಡಿದರೆ ರೈತನಾಗೋದಿಲ್ಲ. ವಾರದಲ್ಲಿ ಮೂರು ದಿನವಾದರೂ ಕೃಷಿ ಚಟುವಟಿಕೆ ಮಾಡಬೇಕು. ಜಗದೀಶ ಶೆಟ್ಟ್ರು ಎಲ್ಲೋ ಕಡೆ ಹೊಲ ಉಳುಮೆ ಮಾಡಿದರೆ ರೈತನಾಗೋದಿಲ್ಲ, ಕೃಷಿ ಚಟುವಟಿಕೆ ದಿನನಿತ್ಯ ನಡೆದರೆ ಮಾತ್ರ ಆತ ರೈತ, ಮಣ್ಣಿನ ಮಗನಾಗಲು ಸಾಧ್ಯ, ಕೃಷಿ ಅನ್ನೋದು ನಮ್ಮ ದಿನ ನಿತ್ಯದ ಕಾರ್ಯವಾಗಬೇಕು ಎಂದಿದ್ದಾರೆ.

ಭತ್ತ ನಾಟಿ ಕಾರ್ಯಕ್ರಮ ದಿಂದ ರೈತರಿಗೆ ಯಾವುದೇ ಲಾಭವಿಲ್ಲ, ಗ್ರಾಮ ವಾಸ್ತವ್ಯದಿಂದ ಯಾವ ಹಳ್ಳಿಗಳು ಉದ್ದಾರವಾಗಿಲ್ಲ. ಕುಮಾರಸ್ವಾಮಿ ಅವರಿಗೆ ಕುಣಿಯಲು ಬಾರದಕ್ಕೆ ಅಂಗಳ ಡೊಂಕು ಎನ್ನುವಂತಾಗಿದೆ. ಮುಖ್ಯಮಂತ್ರಿ ಅವರಿಗೆ ರಾಜ್ಯಭಾರ ಮಾಡಲು ಆಗುತ್ತಿಲ್ಲ ಎಂದರು. ಗುತ್ತಿಗೆದಾರರ ಬಿಲ್ಲ ಹಾಗೂ ಸರಕಾರಿ ನೌಕರರ ಸಂಬಳ ಪಾವತ್ತಿಸುತ್ತಿಲ್ಲ ಎಂದು ದೂರಿದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್ ಗಾಂಧಿ ಭೇಟಿ: ಕಾವೇರಿರುತ್ತಿದೆ ಕಾರಂಜಾ ಸಂತ್ರಸ್ಥರ ಧರಣಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಲು ಗಡಿ ಜಿಲ್ಲೆ ಬೀದರ್ ಗೆ ...

news

ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ವಾಗ್ದಾಳಿ

ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನ್ನು ಸರ್ವನಾಶ ...

news

ಕೇರಳದಲ್ಲಿ ಪ್ರವಾಹ ಪರಿಸ್ಥಿತಿ: ಇಂದು ಕೇಂದ್ರ ಗೃಹ ಸಚಿವರ ಭೇಟಿ

ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು ಪ್ರವಾಹ ಪರಿಸ್ಥಿತಿ ಇದೆ. ಇಂದು ...

news

ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರಾ ಬಿಹಾರ ಸಿಎಂ?

ನವದೆಹಲಿ: ಮುಝಾಫರ್ ಬಾಲಿಕಾ ಗೃಹದಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣದ ...