ಕೊವಿಡ್ ಟೆಸ್ಟ್ ಗೆ ಒಳಗಾದ ಸಿಎಂ; ವರದಿಯಲ್ಲಿ ಏನಿದೆ ಗೊತ್ತಾ?

ಬೆಂಗಳೂರು| pavithra| Last Modified ಶನಿವಾರ, 18 ಜುಲೈ 2020 (10:12 IST)
ಬೆಂಗಳೂರು : ರಾಜ್ಯದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೊವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಇದೀಗ ಅವರ ವರದಿ ಬಂದಿದೆ.

ಸಿಎಂ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ  ಹಾಗೂ ಸಕ್ರಿಯವಾಗಿ ಕೆಲಸದಲ್ಲಿ ಭಾಗಿಯಾಗಿದ್ದ ಕಾರಣ ಸಿಎಂ ಬಿಎಸ್ ವೈ 3 ದಿನಗಳ ಹಿಂದೆ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು.

ಇದೀಗ ಸಿಎಂ ವರದಿ ಬಂದಿದ್ದು, ಅದರಲ್ಲಿ ಸಿಎಂ ಕೊರೊನಾ ನೆಗೆಟಿವ್ ಬಂದಿದೆ. ಇದು ಸಿಎಂ ಹಾಗೂ ಅವರ ಕುಟುಂಬದವರು ನಿಟ್ಟುಸಿರು ಬಿಡುವಂತಾಗಿದೆ.

 


ಇದರಲ್ಲಿ ಇನ್ನಷ್ಟು ಓದಿ :