ಅನ್ ಲಾಕ್ ಬಗ್ಗೆ ಇಂದು ಸಿಎಂ ಯಡಿಯೂರಪ್ಪ ತೀರ್ಮಾನ ಸಾಧ್ಯತೆ

ಬೆಂಗಳೂರು| Krishnaveni K| Last Modified ಬುಧವಾರ, 9 ಜೂನ್ 2021 (08:58 IST)
ಬೆಂಗಳೂರು: ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಅನ್ ಲಾಕ್ ಬಗ್ಗೆ ತೀರ್ಮಾನವಾಗುವ ಸಾಧ‍್ಯತೆಯಿದೆ.
 

ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಈ ವಾರ ಮುಕ್ತಾಯಗೊಳ್ಳಲಿರುವ ಲಾಕ್ ಡೌನ್ ಬಗ್ಗೆ ಇಂದು ನಡೆಯಲಿರುವ ಸಚಿವರೊಂದಿಗಿನ ಸಭೆಯಲ್ಲಿ ಸಿಎಂ ಚರ್ಚಿಸಲಿದ್ದಾರೆ.
 
ಆದರೆ ಈಗ ಜಾರಿಯಲ್ಲಿರುವ ಲಾಕ್ ಡೌನ್ ಜೂನ್ 14 ರವರೆಗೆ ಮುಂದುವರಿಯಲಿದೆ. ಅದಾದ ಬಳಿಕ ಅನ್ ಲಾಕ್ ಹಂತ ಹಂತವಾಗಿ ಮಾಡುವ ಬಗ್ಗೆ ಮತ್ತು ಬಳಿಕ ನೈಟ್ ಕರ್ಫ್ಯೂ ಮಾತ್ರ ಜಾರಿಗೊಳಿಸುವ ಬಗ್ಗೆ ಇಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ.
ಇದರಲ್ಲಿ ಇನ್ನಷ್ಟು ಓದಿ :