ಕೊರೋನಾದಿಂದ ಹೋದ ಮಾನ ಹಿಂಪಡೆಯಲು ಸಿಎಂ ಬಿಎಸ್ ವೈ-ಜೆಪಿ ನಡ್ಡಾ ಸಭೆ

ಬೆಂಗಳೂರು| Krishnaveni K| Last Modified ಭಾನುವಾರ, 20 ಜೂನ್ 2021 (10:17 IST)
ಬೆಂಗಳೂರು: ಕೊರೋನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಕೆಲವೆಡೆ ಹಿನ್ನಡೆ ಅನುಭವಿಸಿತ್ತು. ಅದರಿಂದಾಗಿ ಸಿಎಂ ಬಿಎಸ್ ವೈ ನೇತೃತ್ವದ ಸರ್ಕಾರದ ವಿರುದ್ಧ ಹಲವರು ಟೀಕಾಪ್ರಹಾರ ನಡೆಸಿದ್ದರು.  
> ಕೊರೋನಾ ಸಂದರ್ಭದಲ್ಲಿ ಹೋದ ಮಾನ ಮರಳಿ ಪಡೆಯಲು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಡುವೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ.>   ಈ ಸಭೆಯಲ್ಲಿ ಪಕ್ಷದ ವರ್ಚಸ್ಸು ಮರಳಿ ಪಡೆಯುವುದು, ಪಕ್ಷ ಸಂಘಟನೆಗೆ ಒತ್ತು ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ನಾಳೆಯಿಂದ ಕೇಂದ್ರ ಸರ್ಕಾರದ ವತಿಯಿಂದ ಸಿಗುವ ಉಚಿತ ಕೊರೋನಾ ವ್ಯಾಕ್ಸಿನ್ ಎಲ್ಲಾ ಕೇಂದ್ರಗಳಲ್ಲಿ ಲಭ‍್ಯವಾಗಲಿದೆ. ಹೀಗಾಗಿ ಇದನ್ನು ಸಮರ್ಪಕವಾಗಿ ವಿತರಿಸುವ ಕುರಿತಂತೆಯೂ ಈ ಸಭೆಯಲ್ಲಿ ಜೆಪಿ ನಡ್ಡಾ ಸಲಹೆ ನೀಡಲಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :