ಬಿಜೆಪಿ ಶಾಸಕನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು| Jagadeesh| Last Modified ಶುಕ್ರವಾರ, 26 ಏಪ್ರಿಲ್ 2019 (10:35 IST)
ಮತ ಕೇಳುವ ಸಂದರ್ಭದಲ್ಲಿ ಬಿಜೆಪಿ ಶಾಸಕ, ಬಿಜೆಪಿಗೆ ಮತ ಹಾಕದವರು ತಾಯಿಗಂಡ್ರು ಎಂದಿರುವುದನ್ನು ಖಂಡಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿಕೆ ನೀಡಿದ್ದು, ಮತಕೇಳುವ ಸಂದರ್ಭದಲ್ಲಿ ಚಿಕ್ಕಮಗಳೂರು ಬಿಜೆಪಿ ಸಿ‌.ಟಿ.ರವಿ ಅಸಂವಿಧಾನಿಕ ಪದ ಬಳಸಿದ್ದಾರೆ. ತಾಯಿಗಂಡ್ರು ಎಂದು ಹೇಳಿ ಮಹಿಳೆಯರ ಮತ ಕೇಳಿದ್ದಾರೆ‌. ಸಿಟಿ ರವಿ ಹೇಳಿಕೆಯನ್ನು ಪಕ್ಷದ ನಾಯಕರು ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ. ಇಂತಹ ಪದ ಬಳಕೆ ಎಲ್ಲಿಯೂ ಮಾಡಬಾರದು. ಕ್ಷಮಿಸಲಾಗದಂತಹ ಪದವನ್ನು ಸಿಟಿ ರವಿ ಬಳಸಿದ್ದಾರೆ.‌

ಸಿ.ಟಿ. ರವಿ ‌ಹೇಳಿಕೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಡಲಾಗುವುದು ಎಂದ್ರು. ಚುನಾವಣಾ ಆಯೋಗವೂ ಸಿ.ಟಿ. ರವಿ ‌ವಿರುದ್ಧ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹ ಮಾಡಿದ್ರು.


ಇದರಲ್ಲಿ ಇನ್ನಷ್ಟು ಓದಿ :