ಕಾಂಗ್ರೆಸ್ಸಿನ ಬೀದಿ ಜಗಳ ಬೆಂಗಳೂರಿನಲ್ಲಿ ಒಂದಾಗಲ್ಲ ಅಂತ ದೆಹಲಿಗೆ ಲಿಫ್ಟ್ ಆಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಆಂತರಿಕ ಸಭೆ ವಿಚಾರಕ್ಕೆ ವಿಧಾನಸೌಧದಲ್ಲಿ ಮಾತನಾಡಿ ಡಿಕೆಶಿ ಸಿದ್ದರಾಮಯ್ಯ ಬೀದಿ ಜಗಳ ಆಡ್ತಿದ್ರು,ಇಬ್ಬರ ಜಗಳ ಕಾಂಪ್ರಮೈಸ್ ಮಾಡೋಕೆ ಖರ್ಗೆ ದೆಹಲಿಗೆ ಕರೆದಿದ್ದಾರೆ. ಬೀದಿ ಜಗಳ ಬೆಂಗಳೂರಿನಲ್ಲಿ ಒಂದಾಗಲ್ಲ ಅಂತ ದೆಹಲಿಗೆ ಲಿಫ್ಟ್ ಆಗಿದ್ದಾರೆ. ಮೋದಿ,ಅಮಿತ್ ಶಾ ರಾಜ್ಯಕ್ಕೆ ಬರ್ತಾರೆ ಹುಷಾರಾಗಿರಿ ಅಂತ ಖರ್ಗೆ ಕಾಂಗ್ರೆಸ್ಸಿಗರಿಗೆ ಹೇಳಿದ್ದಾರೆ.